ಶಂಕರ್ ನಾಗ್ ಹುಟ್ಟುಹಬ್ಬದ ವಿಶೇಷ : ಟ್ವಿಟ್ಟರ್ ಮೂಲಕ ವಿಶ್ ಮಾಡಿದ ನಟ ಜಗ್ಗೇಶ್ | Filmibeat Kannada
- 7 years ago
'ಶಂಕ್ರಣ್ಣ'ನನ್ನ ಮೊದಲ ಸಲ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.! ಯಾಕೆ? ಕರಾಟೆ ಕಿಂಗ್ ಶಂಕರ್ ನಾಗ್ ಅವರು ಇಂದು (ನವೆಂಬರ್ 9) ಬದುಕಿದ್ದರೇ 63ನೇ ಹುಟ್ಟುಹಬ್ಬ. ಅವರು ನಮ್ಮ ಜೊತೆ ಇಲ್ಲವಾದರೂ, ಅವರ ಅಭಿಮಾನಿಗಳು, ಅವರ ಒಡನಾಡಿಗಳು, ಅವರ ಚಿತ್ರೋಧ್ಯಮದ ಸ್ನೇಹಿತರು ಎಲ್ಲರೂ ಈ ದಿನ ಅವರನ್ನ ನೆನೆಸಿಕೊಳ್ಳುತ್ತಾರೆ. ಇಂತವರ ಪೈಕಿ ನಟ ಜಗ್ಗೇಶ್ ಕೂಡ ಒಬ್ಬರು. ನವರಸ ನಾಯಕ ಜಗ್ಗೇಶ್ ಅವರು ಶಂಕ್ರಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೇ, ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ಸಲ ನೋಡಿದ ಅನುಭವವನ್ನ ಕೂಡ ಹಂಚಿಕೊಂಡಿದ್ದಾರೆ. ಹಾಗಿದ್ರೆ, ಶಂಕರ್ ನಾಗ್ ಅವರನ್ನ ಜಗ್ಗೇಶ್ ಮೊದಲ ನೋಡಿದ್ದು ಎಲ್ಲಿ? ಆಗ ಜಗ್ಗೇಶ್ ಏನು ಮಾಡುತ್ತಿದ್ದರು. 1983ರಲ್ಲಿ ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ನೋಡಿದ್ದರಂತೆ. ಕೆ.ವಿ ಜಯರಾಂ ನಿರ್ದೇಶನದ 'ಇಬ್ಬನಿ ಕರಗಿತು' ಚಿತ್ರದ ಚಿತ್ರೀಕರಣ ಸೋಫಿಯಾ ಸ್ಕೂಲ್ ನಲ್ಲಿ ನಡೆಯುತ್ತಿತ್ತಂತೆ. ಅದು ಭಾನುವಾರ ಎಂದು ಕೂಡ ಜಗ್ಗೇಶ್ ನೆನಪಿನಲ್ಲಿಟ್ಟುಕೊಂಡಿದ್ದಾರೆ.
Kannada Actor Jaggesh has taken his twitter account to wish to Shankar Nag Birthday.
Kannada Actor Jaggesh has taken his twitter account to wish to Shankar Nag Birthday.
Recommended
ರಕ್ಷಿತಾ ಪ್ರೇಮ್ ಗೆ ಹುಟ್ಟುಹಬ್ಬದ ಸಂಭ್ರಮ | ಜಗ್ಗೇಶ್ ಕೊಟ್ರು ಒಂದು ಸಲಹೆ | Filmibeat Kannada
Filmibeat Kannada
ಸಮಸ್ಯೆಯಲ್ಲಿ ಸಿಲುಕಿದ್ದ ರವಿಚಂದ್ರನ್ ಗೆ ಧೈರ್ಯ ತುಂಬಿದ್ದು ಶಂಕರ್ ನಾಗ್.! | Oneindia Kannada
Filmibeat Kannada