ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ : ಸರ್ಕಾರಕ್ಕೆ ಕೆಲವು ಪ್ರಶ್ನೆಗಳು | Oneindia Kannada|

  • 7 years ago
Proposed Karnataka Private Medical Establishment Act: Here are few questions to Health Minister Ramesh Kumar and Government of Karnataka.

ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಹೊರಟ ಸರಕಾರಕ್ಕೆ ಕೆಲವು ಪ್ರಶ್ನೆಗಳು. ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿರುವ 'ವಿಷ್ಣುಸೇನಾ' ಚಿತ್ರದಲ್ಲಿ ಒಂದು ಸನ್ನಿವೇಶ ಬರುತ್ತದೆ. ರೋಗಿ ಸತ್ತಿದ್ದರೂ, ಬೇರೆ ಬೇರೆ ತಪಾಸಣೆ/ಆಪರೇಷನ್ ಎಂದು ಸಾವಿರಾರು ರೂಪಾಯಿಯನ್ನು ರೋಗಿಯ ಕಡೆಯಿಂದ ಖಾಸಗಿ ಆಸ್ಪತ್ರೆಯವರು ಸುಲಿಗೆ ಮಾಡುತ್ತಾರೆ. ಸಾಧ್ಯವಾದಷ್ಟು ಸುಲಿಗೆ ಮಾಡಿ, ನಂತರ ರೋಗಿ ಸತ್ತಿದ್ದಾರೆಂದು ಆಸ್ಪತ್ರೆಯವರು ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತಾರೆ.ಆ ಚಿತ್ರವನ್ನೇನಾದರೂ ಆರೋಗ್ಯ ಸಚಿವರು ಮತ್ತೆ ಮತ್ತೆ.ನೋಡಿ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ' ಮಂಡಿಸಲು ಮುಂದಾಗಿದ್ದಾರಾ? ಯಾಕೆಂದರೆ, ಸರಕಾರ ಮಂಡಿಸಲು ಮುಂದಾಗಿರುವ ವಿಧೇಯಕದಲ್ಲಿ, price cap ಹೊರತು ಪಡಿಸಿ, ಮಿಕ್ಕೆಲ್ಲಾ ಅಂಶಗಳಿಂದ, ಸಾರ್ವಜನಿಕರಿಗೆ ಅನುಕೂಲ ಹೇಗಿದೆಯೋ, ಅದರಿಂದ ಅನಾನುಕೂಲವೂ ಅಷ್ಟೇ ಇದೆ..ಹಾಗಂತ ಖಾಸಗಿ ಆಸ್ಪತ್ರೆಗಳನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಇಲ್ಲಿ ಮಾಡುತ್ತಿಲ್ಲ. ಎಡ್ಮಿಷನ್ ಫೀ, ಕನ್ಸಲ್ಟಂಟ್ ಫೀ,.. ಹೀಗೆ ಖಾಸಗಿ ಆಸ್ಪತ್ರೆಗಳು, ಜನ ಯಾವ ಆರ್ಥಿಕ ಮಟ್ಟದಲ್ಲಿದ್ದರೂ ದುಡ್ಡು ಪೀಕುವುದನ್ನು ಬಿಡುವುದಿಲ್ಲ. ಇದಕ್ಕೆ ಸಿದ್ದರಾಮಯ್ಯ ಸರಕಾರ ಕಡಿವಾಣ ಹಾಕಲು ಹೊರಟಿದ್ದು, ಒಪ್ಪಿಕೊಳ್ಳುವಂತಹ ವಿಚಾರ.

Recommended