ದರ್ಶನ್ 51ನೇ ಸಿನಿಮಾ ಡಿಸೆಂಬರ್ ನಲ್ಲಿ ಶುರು

  • 7 years ago
Kannada Actor, Challenging Star Darshan's 51st Film Starts From This December.

ಡಿಸೆಂಬರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು? ಇದು 'ಡಿ-ಬಾಸ್' ಅಭಿಮಾನಿಗಳನ್ನ ಕಾಡುತ್ತಿರುವ ದೊಡ್ಡ ಪ್ರಶ್ನೆ. ಇದಕ್ಕೀಗ ಉತ್ತರ ಸಿಕ್ಕಂತಾಗಿದೆ. ಸದ್ಯ 'ಕುರುಕ್ಷೇತ್ರ'ದ ಚಿತ್ರೀಕರಣದಲ್ಲಿರುವ ದಾಸ ಡಿಸೆಂಬರ್ ತಿಂಗಳಿನಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ. ಈಗಾಗಲೇ 51ನೇ ಚಿತ್ರದ ಪೂರ್ವ ತಯಾರಿ ನಡೆಯತ್ತಿದ್ದು, ದರ್ಶನ್ ಬಂದ ಕೂಡಲೇ ಶೂಟಿಂಗ್ ಆರಂಭವಂತೆ. ಇದಕ್ಕು ಮುಂಚೆ ಸ್ವತಃ ದರ್ಶನ್ ಅವರೇ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಗೊಂದಲ ಬೇಡವೆಂದಿದ್ದರು. ಆದ್ರೀಗ, 51ನೇ ಚಿತ್ರದ ನಿರ್ಮಾಪಕ ಹಾಗೂ ತಾಂತ್ರಿಕ ತಂಡ ಇಷ್ಟೊಂದು ತಯಾರಿ ನೋಡಿದ್ರೆ, ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗಿದ್ರೆ, 51ನೇ ಯಾವುದು? ಯಾರು ನಿರ್ದೇಶಕ? ಸಾಕಷ್ಟು ಗೊಂದಲಗಳ ನಡುವೆ ದರ್ಶನ್ ಅವರ 51 ನೇ ಸಿನಿಮಾ ಶೈಲಾಜ್ ನಾಗ್ ಮತ್ತು ಬಿ ಸುರೇಶ್ ಅವರು ನಿರ್ಮಾಣದಲಿ ಆರಂಭವಾಗಲಿದೆಯಂತೆ.

Recommended