ಟೆರೇಸ್ ಮೇಲೆ ನಿರ್ಮಿಸಿದ 'ವಿಮಾನ'ಕ್ಕೆ ಆತ ಇಟ್ಟ ಹೆಸರು ಏನು ಗೊತ್ತಾ ? | Oneindia Kannada

  • 7 years ago
ತನಿಗೆ ಸ್ವಂತ ವಿಮಾನ ಕಟ್ಟುವ ಕನಸು. ಮನೆ ಮಾರಿ ಟೆರೇಸ್ ಮೇಲೆ ತನ್ನ ಕನಸಿನ ವಿಮಾನ ನಿರ್ಮಿಸಿಯೇ ಬಿಟ್ಟ. ಕೊನೆಗೆ ಹಾರಾಟ ಮಾಡಲು ಡಿಡಿಸಿಎ ಲೈಸನ್ಸ್ ಬೇಕಾಗಿತ್ತು. ಅದನ್ನು ಮೋದಿ ತೆಗಿಸಿಕೊಟ್ಟರು. ಕೊನೆಗೆ ಆ ವಿಮಾನಕ್ಕೆ ಆತ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೆಸರಿಟ್ಟ. ಇದು ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಪೈಲಟ್ ಆಗಿರುವ ಮುಂಬೈನ ಕ್ಯಾಪ್ಟನ್ ಅಮೋಲ್ ಯಾದವ್ ರ ಅಚ್ಚರಿಯ, ಎಂಥವರಿಗೂ ಸ್ಪೂರ್ಥಿ ತುಂಬುವ ಕಥೆ. ಈ ಕಥೆ 2011ರದ್ದು. ಇದ್ದ ಮನೆಯನ್ನೂ ಮಾರಿ, ಸತತ ಆರು ವರ್ಷ ಪರಿಶ್ರಮಪಟ್ಟು ಸ್ವಂತ ವಿಮಾನ ತಯಾರಿಸಿದ್ದರು ಅಮೋಲ್ ಯಾದವ್. ಅದೊಂದು ಆರು ಸೀಟಿನ, ಮನೆಯ ಟೆರೇಸ್ ಮೇಲೆ ನಿರ್ಮಾಣವಾದ ವಿಮಾನ.ಅಮೋಲ್ ಕಷ್ಟಕ್ಕೆ ಸ್ಪಂದಿಸಿದ ಫಡ್ನವೀಸ್ ಮೋದಿಗೆ ಈ ಬಗ್ಗೆ ತಿಳಿಸಿ ಲೈಸನ್ಸ್ ಸಿಗಲು ಏರ್ಪಾಟು ಮಾಡಿದರು.


A man builds a 6 seater plane on his terrace. But struggled a lot to get his hands on the license. watch the video to know what happened next

Recommended