ಸಚಿನ್ ತೆಂಡೂಲ್ಕರ್ ಜರ್ಸಿ 10 ಅನಧಿಕೃತವಾಗಿ ನಿವೃತ್ತಿ | Oneindia Kannada

  • 7 years ago
ಸಚಿನ್ ಅವರ ವೃತ್ತಿ ಬದುಕು ಅಂತ್ಯವಾದ ಬಳಿಕ ಅವರು ಬಳಸುತ್ತಿದ್ದ ಜರ್ಸಿ 10 ಬೇರೊಬ್ಬರಿಗೆ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಮುಂಬೈ ಇಂಡಿಯನ್ಸ್ ಮನಸು ಮಾಡಿರಲಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಓನರ್ ನೀತಾ ಅಂಬಾನಿ ಅವರು, 10ನೇ ನಂಬರ್ ಜರ್ಸಿಯನ್ನು ರಿಟೈರ್ ಮಾಡಲು ನಿರ್ಧರಿಸುವುದಾಗಿ ಹೇಳಿದ್ದರು. ಈಗ ಬಿಸಿಸಿಐ ಕೂಡಾ ಇದೇ ರೀತಿ ನಿರ್ಧರಕ್ಕೆ ಬಂದಿದೆ. ಸಚಿನ್ ಅವರು ನಿವೃತ್ತಿ ಘೋಷಿಸಿದ ಬಳಿಕ ಜರ್ಸಿ 10 ಯಾರಿಗೂ ನೀಡಿರಲಿಲ್ಲ. ಆದರೆ, ಇತ್ತೀಚೆಗೆ 26 ವರ್ಷ ವಯಸ್ಸಿನ ಶಾರ್ದೂಲ್ ಠಾಕೂರ್ ಅವರು ಏಕದಿನ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಾಗ 10ನೇ ನಂಬರ್ ಜರ್ಸಿ ತೊಟ್ಟಿದ್ದರು. ಆದರೆ, ಸಾರ್ವಜನಿಕವಾಗಿ ಅನೇಕ ಅಭಿಮಾನಿಗಳು ಟ್ವೀಟ್ ಮಾಡಿ ಕಾಲೆಳೆದಿದ್ದರು. ಸಾಮಾನ್ಯವಾಗಿ ಈ ರೀತಿ ಕ್ಲಾಸಿಕ್ ಆಟಗಾರರ ಜರ್ಸಿಗೆ ವಿದಾಯ ಹೇಳುವ ಪದ್ಧತಿ ಫುಟ್ಬಾಲ್ ಜಗತ್ತಿನಲ್ಲಿ ಕಾಣಬಹುದು. ಕ್ರಿಕೆಟ್ ನಲ್ಲಿ ಹೊಸದೊಂದು ಆಧ್ಯಾಯಕ್ಕೆ ಮುಂಬೈ ಇಂಡಿಯನ್ಸ್ ಮುನ್ನುಡಿ ಹಾಡಿದ್ದು, ಸಚಿನ್ ಅಭಿಮಾನಿಗಳಿಗೂ ಇದು ಸಮ್ಮತವಾಗಿದೆ.

Finally BCCI has unofficially decided to retire the legend's jersey #10 and sachin's fans are very happy about it.

Recommended