• 7 years ago
ಬೆಂಗಳೂರು, ಡಿಸೆಂಬರ್ 9: "ಸುಪಾರಿ ಅಂದರೆ ಯಾರನ್ನಾದರೂ ಕೊಲೆ ಮಾಡುವಂತೆ ದುಡ್ಡು ಮತ್ತೊಂದು ನೀಡಿ, ಪ್ರೇರಣೆ ನೀಡೋದು. ರವಿ ಬೆಳಗೆರೆ ಅವರ ಪ್ರಕರಣದಲ್ಲಿ ಸುಪಾರಿ ಪಡೆದ ವ್ಯಕ್ತಿ ಹಾಗೂ ಮತ್ತೊಬ್ಬ ತಾಹೀರ್ ಸಾಕ್ಷಿಯಾಗಿ ಇದ್ದಾರೆ. ಈ ಹಂತದಲ್ಲಿ ಹೇಳಬಹುದಾದದ್ದು ಏನೆಂದರೆ, ಈ ಪ್ರಕರಣ ಗಟ್ಟಿಯಾಗಿದೆ" ಎಂದರು ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್.ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ವಿಚಾರಣೆ ಕೂಡ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಕಾನೂನು ಅಂಶಗಳ ಬಗ್ಗೆ ಒನ್ಇಂಡಿಯಾ ಕನ್ನಡವು ಸಂಗ್ರಾಮ್ ಸಿಂಗ್ ಅವರ ಸಂದರ್ಶನ ಮಾಡಿದೆ.ಸುಪಾರಿ ಹತ್ಯೆಗೆ ಪ್ರಯತ್ನ ಮಾಡಿರುವುದು ಐಪಿಸಿ ಸೆಕ್ಷನ್ 307 ಅಡಿ ಬರುತ್ತದೆ. ಇನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3 ಹಾಗೂ 25ರ ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಒಂದು ವೇಳೆ ಕೊಲೆ ಯತ್ನದ ಪ್ರಕರಣ ದಾಖಲಾದರೆ ಏಳು ವರ್ಷದ ತನಕ ಶಿಕ್ಷೆ ಆಗಬಹುದು. ಅದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಚಾರ ಆಗಿರುತ್ತದೆ ಎಂದರು ಸಂಗ್ರಾಮ್ ಸಿಂಗ್.

After the arrest of Hai Bangalore weekly editor Ravi Belagere in connection with supari killer. Here is an interview of retired ACP Sangram Singh

Category

🗞
News

Recommended