ಶುಭಾ ಪೂಂಜಾಗೆ ಕರಿಯ ಆದ್ರೂ ಒಳ್ಳೆ ಹುಡುಗನನ್ನ ಮದುವೆಯಾಗಬೇಕಂತೆ | Filmibeat Kannada

  • 7 years ago
Kannada Actress Shubha Poonja finally dreams to get married. Shubha has shared few things about the qualities she wanted in her Dream Boy . Shubha Poonja entered the cinema industry from Moggina Mannasu movie. Now she speaks about her Dream Boy.

''ನಾನು ಈಗ ಪ್ರೀತಿಯಲ್ಲಿ ಬೀಳಬೇಕು... ನನಗೂ ಒಬ್ಬ ಗೆಳೆಯ ಬೇಕು..'' ಎಂದು ಬೆಳ್ಳಿತೆರೆ ಮೇಲೆ ಹಾಡಿ ಕುಣಿದಿದ್ದ ನಟಿ ಶುಭಾ ಪೂಂಜಾ ನಿಜ ಜೀವನದಲ್ಲಿ ಇದೀಗ ನನಗೂ ಒಬ್ಬ ಗೆಳೆಯ ಬೇಕು ಎನ್ನುತ್ತಿದ್ದಾರೆ. ಸಿನಿಮಾ ನಾಯಕಿಯರು ಸಾಮಾನ್ಯವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಾಗೂ ಉದ್ಯಮದಲ್ಲಿರುವ ಗಣ್ಯರನ್ನ ಮದುವೆ ಆಗುವುದು ಕಾಮನ್. ಆದರೆ ಶುಭಾ ಎಲ್ಲರಿಗಿಂತಲೂ ಭಿನ್ನ ಎನ್ನುವುದು ಅವರ ಅಭಿರುಚಿಯಲ್ಲಿ ತಿಳಿದು ಬರುತ್ತಿದೆ. ಶುಭಾ ಅಭಿನಯದ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಹಾಡಿರುವಂತೆ ಒಂದಿಷ್ಟು ಕ್ವಾಲಿಟಿ ಇರುವ ಹುಡುಗನನ್ನೇ ಮದುವೆ ಆಗುವುದು ಅಂತ ಹೇಳಿದ್ದಾರೆ. ಹಾಗಾದರೆ ಅವರಿಗೆ ಎಂತಹ ಹುಡುಗ ಬೇಕು..? ಆತನಲ್ಲಿ ಏನೆಲ್ಲಾ ಕ್ವಾಲಿಟಿ ಇರಬೇಕು? 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಮುದ್ದಾದ ನಾಯಕಿ ಅಂತಾನೇ ಗುರುತಿಸಿಕೊಂಡಿರುವ ನಟಿ ಶುಭಾ ಪೂಂಜಾ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ಮುದ್ದಾದ ನಾಯಕಿಗೆ ಮನಸ್ಸಿನಲ್ಲಿರುವ ಆ ರಾಜಕುಮಾರನ ಬಗ್ಗೆ ಹೇಳಿಕೊಂಡಿದ್ದಾರೆ.