ದರ್ಶನ್ ಮನೆಗೆ ಸುಗ್ಗಿ ಹಬ್ಬಕ್ಕೆ ಬಂದ ವಿಶೇಷ ಕಾರ್ |Filmibeat Kannada

  • 7 years ago
ಹಬ್ಬಗಳು ಹಾಗೂ ಹುಟ್ಟುಹಬ್ಬಗಳು ಸಿನಿಮಾ ಸ್ಟಾರ್ ಗಳ ಜೀವನದಲ್ಲಿ ಸಾಕಷ್ಟು ಇಂಪಾರ್ಟೆಂಟ್ ಆಗಿರುತ್ತವೆ. ಹಬ್ಬಗಳ ದಿನ ಮತ್ತು ಬರ್ತಡೇ ದಿನ ಅವರುಗಳು ಅಭಿನಯಿಸುವ ಸಿನಿಮಾಗಳ ಮಹೂರ್ತ ಹಾಗೂ ಹಾಡುಗಳ ಬಿಡುಗಡೆ, ಹೊಸ ವಸ್ತುಗಳ ಖರೀದಿ ಹೀಗೆ ಸಾಕಷ್ಟು ಒಳ್ಳೆ ಕೆಲಸಗಳನ್ನ ಇಂತಹ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ.

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ಡಬಲ್ ಖುಷಿ ಕೊಟ್ಟಿದ್ದಾರೆ. ಒಂದು ಕಡೆ ದರ್ಶನ್ ಅಭಿನಯದ 51ನೇ ಚಿತ್ರದ ಮಹೂರ್ತ ನೆರವೇರಿದೆ ಮತ್ತೊಂದು ಕಡೆ ದರ್ಶನ್ ಫ್ಯಾಮಿಲಿಗೆ ಸ್ಪೆಷಲ್ ಅತಿಥಿ ಸೇರಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ಟೆಸ್ಟ್ ಡ್ರೈವ್ ನೋಡಿದ್ದ ಕಾರ್ ಅನ್ನು ದರ್ಶನ್ ಕೊಂಡುಕೊಂಡಿದ್ದಾರೆ. ಕಾರ್ ಜೊತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ಆಚರಣೆ ಮಾಡಲಾಗಿದೆ. ಹೇಗಿದೆ ಡಿ ಬಾಸ್ ಹೊಸ ಕಾರ್? ಸುಗ್ಗಿ ಹಬ್ಬಕ್ಕೆ ಏನೆಲ್ಲಾ ಮಾಡಿದ್ರು? ಈ ವಿಡಿಯೋ ನೋಡಿ
Actor Darshan has a huge car craze and every fan of his know this . This time Challenging star Darshan bought a new Lamborghini on this special day

Recommended