ರೋಗಿಯ ಸಂಬಂಧಿಯನ್ನು ಎಳೆದು ಸಾಯಿಸಿದ ಎಂಆರ್ ಐ ಯಂತ್ರ! | Oneindia Kannada

  • 6 years ago
ಸ್ಕ್ಯಾನ್ ಮಾಡಿಸಿಕೊಳ್ಳುವವರು ಸಹವಾಸವೇ ಸಾಕು ಎಂದು ಆಸ್ಪತ್ರೆಗಳಿಗೆ ಕೈಮುಗಿಯುವಂಥ ದುರ್ಘಟನೆಯೊಂದು ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ನಡೆದಿದೆ.

ಸಂಬಂಧಿಯೊಬ್ಬರ ತಾಯಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸುವುದಕ್ಕಾಗಿ 'ನಾಯರ್ ಆಸ್ಪತ್ರೆ'ಗೆ ತೆರಳಿದ್ದ ರಾಜೇಶ್ ಮಾರು(32) ಎಂಬ ವ್ಯಕ್ತಿ ವೈದ್ಯರ, ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಇತ್ತೀಚೆಗೆ ತಾನೇ ಉದ್ಯೋಗ ಪಡೆದ ಸಂತಸದಲ್ಲಿದ್ದ ರಾಜೇಶ್ ಮಾರು ತಮ್ಮ ಸಂಬಂಧಿಯೊಬ್ಬರ ತಾಯಿಗೆ ಅನಾರೋಗ್ಯವೆಂದು ಅವರಿಗೆ ಸಹಾಯ ಮಾಡಲು ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ರೋಗಿಗೆ ಎಂಆರ್ ಐ ಸ್ಕ್ಯಾನ್ ಮಾಡಿಸಬೇಕೆಂದು ವೈದ್ಯರು ಹೇಳಿದ್ದರು. ಎಂಆರ್ ಐ ಸ್ಕ್ಯಾನ್ ಮಾಡಿರುವ ಕೋಣೆಯಲ್ಲಿ ಯಾವುದೇ ರೀತಿಯ ಲೋಹವನ್ನೂ ಕೊಂಡೊಯ್ಯುವಂತಿಲ್ಲ. ಈ ವಿಷಯ ಗೊತ್ತೇ ಇದ್ದುದರಿಂದ ಆಸ್ಪತ್ರೆ ಸಿಬ್ಬಂದಿ ರೋಗಿ ಮತ್ತು ಅವರ ಕಡೆಯವರಿಗೆ ಹೇರ್ ಕ್ಲಿಪ್, ಒಡವೆ, ಪಿನ್, ಸೇರಿದಂತೆ ಎಲ್ಲಾ ಲೋಹದ ವಸ್ತುಗಳನ್ನೂ ಕೋಣೆಯಿಂದ ಆಚೆಯೇ ಇಟ್ಟು ಬರುವುದಕ್ಕೆ ಹೇಳಿದ್ದಾರೆ.
In a tragic incident man died after sucked into an MRI (Magnetic resonance imaging) machine in Nair hospital Mumbai. The police arrested 3 in connection with this incident and booking them under the IPC's section 304A (negligence causing death; a bailable offence)

Category

🗞
News

Recommended