• 7 years ago

ನಾಲ್ಕು ದಶಕಗಳ ಹಿಂದೆ ಆರ್ಕೆಸ್ಟ್ರಾದ ಮೂಲಕ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು
ಮಾಡಿದಂತಹ ತ್ರಿವಳಿ ಸಹೋದರರು, ಮೋಹನ್ ಎಂಡ್ ಬ್ರದರ್ಸ್. 25ಕ್ಕೂ ಹೆಚ್ಚು ಚಿತ್ರಗಳಿಗೆ
ಸಂಗೀತ ನಿರ್ದೇಶನ ಮಾಡಿ, ಮೈಸೂರು ಮೋಹನ್ ಆರ್ಕೆಸ್ಟ್ರಾದ ಮೂಲಕ ನೂರಕ್ಕೂ ಲೈವ್
ಕನ್ಸರ್ಟ್ ನೀಡಿರುವ ಮೋಹನ್ ಆಲಿಯಾಸ್ ಮೈಸೂರು ಮೋಹನ್.

ಇವರ ಸಹೋದರ ಜೊತೆಗೆ ಖ್ಯಾತ ಗಿಟಾರಿಸ್ಟ್ ಆಗಿರುವ ಸುದರ್ಶನ್ ಅವರು, ಸಿ ಅಶ್ವಥ್, ರಾಜು
ಅನಂತಸ್ವಾಮಿ, ಎಸ್ಪಿಬಿ ಮುಂತಾದ ಘಟಾನುಗಟಿಗಳ ಜೊತೆ ಕೆಲಸ ಮಾಡಿರುವವರು. ಇನ್ನೊಬ್ಬ
ಸಹೋದರ ಗೋಪಿ, ಫೇಮಸ್ ಬೇಸ್ ಗಿಟಾರಿಸ್ಟ್, ಜೊತೆಗೆ, ಹಂಸಲೇಖ ಅವರ ರೈಟ್ ಹ್ಯಾಂಡ್.

ವರನಟ ಡಾ. ರಾಜಕುಮಾರ್ ಜೊತೆ 50ಕ್ಕೂ ಹೆಚ್ಚು ವಾದ್ಯಗೋಷ್ಠಿ ನಡೆಸಿರುವ ಈ ತ್ರಿವಳಿ
ಸಹೋದರರ ಅಂದಿನ ಮತ್ತು ಇಂದಿನ ಅನುಭವ ಹೇಗಿದೆ? ಅವರ ಜೊತೆಗಿನ ಸಂದರ್ಶನದ ಆಯ್ದಭಾಗ ಇಂತಿದೆ.

Category

🎵
Music

Recommended