• 4 years ago
ಹೆರಿಗೆಯ ಬಳಿಕ ಉಬ್ಬಿದ್ದ ಹೊಟ್ಟೆಯ ಚರ್ಮದಲ್ಲಿ ಸೆಳೆತದ ಗುರುತುಗಳು ಮೂಡಿರುತ್ತವೆ. ಇದಕ್ಕೆ ಕಾರಣವೇನು ಮತ್ತು ಇದನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಮವೈದ್ಯರು ಏನು ಹೇಳುತ್ತಾರೆ, ಇದಕ್ಕೆ ಇರುವ ಪರಿಹಾರಗಳೇನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಹೆರಿಗೆಯ ಬಳಿಕ ಹಿಂದಿನ ಅಂಗ ಸೌಷ್ಟವ ಮತ್ತು ಸೌಂದರ್ಯವನ್ನು ಹೊಂದುವುದು ಪ್ರತಿ ತಾಯಿಯ ಆಕಾಂಕ್ಷೆ ಆಗಿರುತ್ತದೆ. ಇದರಲ್ಲಿ ಹುಲಿಯ ಪಟ್ಟೆಗಳಂತೆ ಕಾಣುವ ಗುರುತುಗಳು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತವೆ. ಇವುಗಳು ಹೇಗೆ ಮೂಡುತ್ತವೆ ಮತ್ತು ಇದನ್ನು ಬರದಂತೆ ತಡೆಯಲು ಅಥವಾ ಈಗಾಗಲೇ ಬಂದಿದ್ದರೆ ಇವನ್ನು ಹೇಗೆ ಇಲ್ಲವಾಗಿಸಬಹುದು ಎಂಬುದರ ಬಗ್ಗೆ ಮುಂದೆ ತಿಳಿಯೋಣ.

Recommended