ಬೇಸಿಗೆ ಬಂತೆಂದರೆ ಒಂದು ರೀತಿಯ ಭಯ ಶುರು. ಎಲ್ಲೆಲ್ಲಿಯೂ ನೀರಿಗೆ ಹಾಹಾಕಾರ. ತರಕಾರಿ ಹಣ್ಣುಗಳ ಬೆಲೆಗಳು ಗಗನಚುಂಬಿ ಕಟ್ಟಡಗಳಂತೆ ಮೇಲೇರುತ್ತಲೇ ಇರುತ್ತವೆ. ಸಾಲದ್ದಕ್ಕೆ ಸಾಂಕ್ರಾಮಿಕ ರೋಗಗಳ ಹಾವಳಿ ಬೇರೆ. ಒಂದು ತಿಂದರೆ ಹೆಚ್ಚು ಒಂದು ತಿಂದರೆ ಕಮ್ಮಿ ಎಂಬಂತಾಗುತ್ತದೆ ಆರೋಗ್ಯ. ವಿಪರೀತ ಔಷಧಿಗಳ ಸೇವನೆಯೂ ನಿಷಿದ್ಧ. ಏಕೆಂದರೆ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಭಯ. ಆಯುರ್ವೇದ ಪಂಡಿತರ ಪ್ರಕಾರ ಬಿರು ಬೇಸಿಗೆಯ ಕಾಲ ದೇಹದ ಪಿತ್ತದ ಕಾಲವಂತೆ!!! ಆದ್ದರಿಂದ ಆದಷ್ಟು ನಮ್ಮ ದೇಹದ ಪಿತ್ತವನ್ನು ನಿಯಂತ್ರಿಸಿದರೆ ಯಾವ ಖಾಯಿಲೆಯೂ ಹತ್ತಿರ ಸುಳಿಯದೆ ಎಂದಿನಂತೆ ಆರಾಮವಾಗಿ ಜೀವನ ನಡೆಸಬಹುದು. ಕೆಲವು ಆಯುರ್ವೇದ ತಜ್ಞರು ಹೇಳುವ ಪ್ರಕಾರ ಆದಷ್ಟು ನಮ್ಮ ದೇಹದ ಉಷ್ಣಾಂಶವನ್ನು ತಗ್ಗಿಸಲು ಬೇಸಿಗೆಯಲ್ಲಿ ಅಲ್ಕಲೈನ್ ಅಂಶ ಹೊಂದಿರುವ ಆಹಾರಗಳನ್ನೇ ಸೇವಿಸಬೇಕಂತೆ. ಹಸಿರು ಎಲೆ ತರಕಾರಿಗಳು, ನೀರಿನಂಶ ಹೆಚ್ಚಿರುವ ತರಕಾರಿ ಹಣ್ಣುಗಳು ಮತ್ತು ಹಣ್ಣಿನ ರಸ ಹೀಗೆ ಇತ್ಯಾದಿ ಆಹಾರಗಳು ಬೇಸಿಗೆಯಲ್ಲಿ ಬೆವರಿನ ರೂಪದಲ್ಲಿ ಹಾವಿಯಾಗುತ್ತಿರುವ ನಮ್ಮ ದೇಹದ ನೀರಿನ ಅಂಶವನ್ನು ಮತ್ತೆ ಸಮತೋಲನಕ್ಕೆ ತರುತ್ತವೆ. ಅವರ ಸಲಹೆಗಳಂತೆ ಬೇಸಿಗೆಗೆ ಕೆಲವೊಂದು ಆಯುರ್ವೇದಿಕ ಟಿಪ್ಸ್ ಗಳನ್ನು ಇಲ್ಲಿ ಕೊಟ್ಟಿರುತ್ತೇವೆ.
Category
🛠️
Lifestyle