• 5 years ago
ಕೂದಲು ಆಕರ್ಷಕವಾಗಿದ್ದರೆ ಅದು ಮುಖದ ಅಂದ ಹೆಚ್ಚಿಸುವುದು. ಕೂದಲು ಚೆನ್ನಾಗಿ ಕಾಣಬೇಕು, ಸೊಂಪಾಗಿ ಬೆಳೆಯಬೇಕೆಂದು ಅದರ ಆರೈಕೆ ಕಡೆ ತುಂಬಾ ಕಾಳಜಿ ವಹಿಸುತ್ತೆವೆ.ಆದರೆ ಕೆಲವೊಮ್ಮೆ ಕೂದಲು ಆಕರ್ಷಕವಾಗಿ ಕಾಣಬೇಕೆಂದು ನಾವು ಮಾಡುವ ಹೇರ್‌ ಸ್ಟೈಲ್, ನಮಗೆ ಗೊತ್ತಿಲ್ಲದೆ ನಾವು ಮಾಡುವ ತಪ್ಪುಗಳು ಕೂದಲಿನ ಆರೋಗ್ಯ ಹಾಳು ಮಾಡಿ ಕೂದಲು ಒರಟಾಗುವುದು, ಕೂದಲು ಉದುರುವುದು ಮುಂತಾದ ಸಮಸ್ಯೆ ಉಂಟು ಮಾಡುತ್ತದೆ. ನಾವು ಮಾಡುವ ಸಣ್ಣ ತಪ್ಪುಗಳ ಅರಿವು ನಮಗೆ ಉಂಟಾಗಿರುವುದಿಲ್ಲ, ಬೇರೆ ಯಾವುದೋ ಕಾರಣಕ್ಕೆ ಕೂದಲು ಉದುರುತ್ತಿದೆ ಎಂದು ಭಾವಿಸಿ ತುಂಬಾ ಟೆನ್ಷನ್‌ ಮಾಡಿಕೊಂಡು ಕೂದಲು ಉದುರುವುದನ್ನು ತಡೆಗಟ್ಟಲು ಏನು ಮಾಡಬೇಕೆಂದು ಪರಿಹಾರಕ್ಕಾಗಿ ಹುಡುಕುತ್ತೇವೆ. ನಿಮ್ಮ ಕೂದಲು ಉದುರುತ್ತಿದ್ದರೆ, ಇಲ್ಲಾ ಒರಟಾಗುತ್ತಿದ್ದರೆ ಕೂದಲಿನ ಅಂದಕ್ಕಾಗಿ ನೀವು ಈ ತಪ್ಪುಗಳನ್ನು ಮಾಡುತ್ತಿರುವಿರಾ? ಎಂದು ಗಮನಿಸುವುದು ಒಳ್ಳೆಯದು. ಇಲ್ಲಿ ನಾವು ಸಾಮಾನ್ಯವಾಗಿ ಮಾಡುವ 6 ತಪ್ಪುಗಳ ಬಗ್ಗೆ ಹೇಳಿದ್ದೇವೆ, ಈ ತಪ್ಪುಗಳನ್ನು ನೀವೂ ಮಾಡುತ್ತಿದ್ದರೆ ಇಂದೇ ಅದನ್ನ ಸರಿಪಡಿಸಿ ನಿಮ್ಮ ಕೂದಲಿನ ರಕ್ಷಣೆ ಮಾಡಿ.

Recommended