• 5 years ago
ಮೇಕಪ್ ಅನ್ನುವುದು ಮಹಿಳೆಯರಿಗೆ ತಮ್ಮ ಸೌಂದರ್ಯ ವೃದ್ಧಿಸಲು ಒಂದು ವಿಧಾನ. ಗುಂಪಿನಲ್ಲಿ ತಾವು ಎದ್ದು ಕಾಣಬೇಕು, ತಮ್ಮ ಸೌಂದರ್ಯವನ್ನು ಎಲ್ಲರೂ ದಿಟ್ಟಿಸಿ ನೋಡಬೇಕು ಎನ್ನುವಂತಹ ಕನಸು ಪ್ರತಿಯೊಬ್ಬ ಮಹಿಳೆಯರಲ್ಲೂ ಇರುವುದು. ಹೀಗಾಗಿ ಅವರು ಮೇಕಪ್ ಗೆ ಮೊರೆ ಹೋಗುವರು. ಕೆಲವರು ಮೇಕಪ್ ಇಲ್ಲದೆ ಹೊರಗಡೆ ಹೋಗುವುದೇ ಇಲ್ಲ. ಸಿನಿಮಾ ನಟಿಯರು ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಸೌಂದರ್ಯದ ಅರ್ಧದಷ್ಟು ಮೇಕಪ್ ನಿಂದಲೂ ಬಂದಿರುವುದು. ಆದರೆ ಎಲ್ಲಾ ಸಮಯದಲ್ಲಿ ಮೇಕಪ್ ಧರಿಸುವುದು ಚರ್ಮಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಮೇಕಪ್ ಸಾಧನಗಳಲ್ಲಿ ಇರುವಂತಹ ಕೆಲವೊಂದು ಹಾನಿಕಾರಕ ರಾಸಾಯನಿಕಗಳು ತುಂಬಾ ಹಾನಿ ಉಂಟು ಮಾಡುವುದು. ಮೇಕಪ್ ಹಚ್ಚಿಕೊಳ್ಳುವ ವೇಳೆ ಮಾಡಲೇಬಾರದ ಕೆಲವೊಂದು ವಿಚಾರಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿಕೊಂಡು ಮುಂದೆ ಮೇಕಪ್ ಹಚ್ಚುವಾಗ ನೀವು ಎಚ್ಚರಿಕೆ ವಹಿಸಿ.

Recommended