ಕಲ್ಲಂಗಡಿ ಹಣ್ಣು, ಈ ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಇದು ದೊರೆಯುತ್ತದೆ. ಬಿಸಿಲಿನಲ್ಲಿ ಬಾಯಾರಿಕೆಯಾದಾಗ ಇದನ್ನು ನೋಡಿದ ತಕ್ಷಣ ಸವಿಯಬೇಕೆಂದು ಅನಿಸಿಯೇ ಅನಿಸುತ್ತದೆ. ಇನ್ನು ಇದರಲ್ಲಿರುವ ಆರೋಗ್ಯಕರ ಗುಣಗಳು ಒಂದಾ.. ಎರಡು.. ಮೆಗ್ನಿಷ್ಯಿಯಂ ಅಧಿಕವಿರುವ ಈ ಹಣ್ಣನ್ನು ಮಧುಮೇಬಹಿಗಳು ಕೂಡ ಸವಿಯಬಹುದಾಗಿದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಲೆಯದು, ಸ್ನಾಯುಗಳಲ್ಲಿ ಊತ ಕಡಿಮೆ ಮಾಡುತ್ತದೆ, ಕ್ಯಾನ್ಸರ್ ತಡೆಗಟ್ಟುತ್ತದೆ, ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸುತ್ತದೆ ಹೀಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇಷ್ಟೆಲ್ಲಾ ಪ್ರಯೋಜನವಿದೆ ಎಂದು ಕೊಂಡು ತಿನ್ನುವಾಗ ಆ ಹಣ್ಣು ಆ ಎಲ್ಲಾ ಗುಣಗಳನ್ನು ಹೊಂದಿದೆಯೇ? ಇಲ್ಲಾ ವಿಷಕಾರಿಯಾಗಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು. ಅದ್ಹೇಗೆ ಹಣ್ಣು ವಿಷಕಾರಿ ಅಂತೀರಾ? ಹಣ್ಣೇನು ನೈಸರ್ಗಿಕವಾಗಿ ಹಾನಿಕಾರಕವಾಗಿರುವುದಿಲ್ಲ, ಆದರೆ ಕೆಲವರ ದುರಾಸೆಯ ಫಲದಿಂದ ಅಂಥ ಪ್ರಯೋಜನಕಾರಿ ಹಣ್ಣನ್ನು ವಿಷಕಾರಿ ಮಾಡಿರುತ್ತಾರೆ. ಕಲ್ಲಂಗಡಿ ಬೇಗನೆ ದೊಡ್ಡದಾಗಲಿ, ಅದರೊಳಗೆ ತಿರುಳು ಬಲಿತಿರದಿದ್ದರೂ ಕೆಂಪಗೆ ಕಾಣಲಿ ಎಂಬ ದುರುದ್ದೇಶದಿಂದ ಅದಕ್ಕೆ ಇಂಜೆಕ್ಷನ್ ನೀಡಿರುತ್ತಾರೆ. ಅಂಥ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ನಾವು ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಹೇಗೆ ಕೊಳ್ಳಬೇಕು, ತಂದ ಹಣ್ಣಿನಲ್ಲಿ ಏನು ವ್ಯತ್ಯಾಸ ಕಂಡು ಬಂದರೆ ಬಳಸಬಾರದು ಎಂಬ ಮಾಹಿತಿ ನೀಡಿದ್ದೇವೆ ನೋಡಿ.
Category
🛠️
Lifestyle