• 4 years ago
ಡಾ. ಶರದ್ ಕುಲಕರ್ಣಿ BAMS, M.S.(PhD) ಆಯುರ್ವೇದ ಸರ್ಜನ್ ಕೊರೊನಾ ಬಿಕ್ಕಟ್ಟಿನಿಂದ ಜೀವನಶೈಲಿಯಲ್ಲಿ ಆದ ಸವಾಲುಗಳ ಬಗ್ಗೆ ನೇರ ಸಂದರ್ಶನ.
ಕೊರೊನಾ ಬಿಕ್ಕಟ್ಟಿನಿಂದಾಗಿ ಪ್ರತಿಯೊಬ್ಬರ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಜೀವನಶೈಲಿ ತುಂಬಾ ಪ್ರಭಾವ ಬೀರುತ್ತದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
ಒಂದು ಕಡೆ ಕೊರೊನಾ ವೈರಸ್ ಭಯ, ಮತ್ತೊಂದು ಕಡೆ ವ್ಯಾಪಾರ ವ್ಯವಹಾರಗಳಿಲ್ಲ, ಜನರು ಕೆಲಸಗಳನ್ನು ಕಳೆದು ಕೊಳ್ಳುತ್ತಿದ್ದಾರೆ. ಇನ್ನು ಜಿಮ್‌, ಫಿಟ್ನೆಸ್‌ ಸೆಂಟರ್‌ಗೆ ಹೋಗ್ತಾ ಇದ್ದವರಿಗೆ ಹೋಗುವುದಕ್ಕೆ ಸಾಧ್ಯವಾಗ್ತಾ ಇಲ್ಲ. ಇವೆಲ್ಲಾ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಜೀವನಶೈಲಿಯಲ್ಲಿ ಎದುರಾದ ಸವಾಲುಗಳನ್ನು ಎದುರಿಸುವುದು ಹೇಗೆ? ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಏನು ಮಾಡಬೇಕು ಎಂಬೆಲ್ಲಾ ಉಪಯುಕ್ತ ಟಿಪ್ಸ್ ನೀಡಿದ್ದಾರೆ ಡಾ. ಶರದ್‌ ಕುಲಕರ್ಣಿ. ಕನ್ನಡ ಬೋಲ್ಡ್‌ ಸ್ಕೈ ಫೇಸ್‌ಬುಕ್‌ ಲೈವ್‌ನಲ್ಲಿ ಜನರ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿರುವ ಅವರು ಈ ಸಮಯದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀವು ಕಷಾಯ ಕುಡಿಯುತ್ತಿದ್ದರೆ ಎಷ್ಟು ಪ್ರಮಾಣದಲ್ಲಿ ಕುಡಿದರೆ ಒಳ್ಳೆಯದು ಎಂಬೆಲ್ಲಾ ಮಾಹಿತಿ ನೀಡಿದ್ದಾರೆ ನೋಡಿದ್ದಾರೆ ನೋಡಿ:

#DoctorsDay #NationalDoctorsDay #doctorsday2020 #CoronaPandemic

Recommended