ಕೆಮ್ಮು, ಜ್ವರ, ಶೀತ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಕೊರೊನಾವೈರಸ್ ಈ ಲಕ್ಷಣಗಳ ಜೊತೆಗೆ ಇನ್ನಿತರ ಕೆಲವೊಂದು ಲಕ್ಷಣಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೊರೊನಾವೈರಸ್ ಲಕ್ಷಣ ಎಲ್ಲಾ ರೋಗಿಗಳಲ್ಲಿ ಒಂದೇ ರೀತಿ ಇಲ್ಲದಿರುವುದೇ ಈ ರೋಗ ಪತ್ತೆ ಹಚ್ಚು ಇರುವ ಪ್ರಮುಖ ತೊಂದರೆಯಾಗಿದೆ. ಕೆಲವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ದರೂ ಕೋವಿಡ್ 19 ಇರುವುದು ದೃಢಪಟ್ಟಿದೆ. ಇನ್ನು ಕೆಲವರಲ್ಲಿ ಜ್ವರ ಇರುವುದಿಲ್ಲ ಬದಲಿಗೆ ಮೈಯಲ್ಲಿ ಅಲರ್ಜಿ, ಕಾಲುಗಳಲ್ಲಿ ಗುಳ್ಳೆಗಳು ಎದ್ದು ನೋವು ಮುಂತಾದ ಲಕ್ಷಣಗಳು ಕಂಡು ಬಂದಿರುವುದಾಗಿ ಯುಕೆ ಮತ್ತು ಯುಎಸ್‌ನಲ್ಲಿ ನಡೆಸಿದ ಸಂಶೋಧನೆಗಳು ಹೇಳಿವೆ. ತಲೆನೋವು, ಸ್ನಾಯುಗಳಲ್ಲಿ ನೋವು, ತಲೆಸುತ್ತು, ಬೇಧಿ, ಗೊಂದಲ, ಹಸಿವು ಇಲ್ಲದಿರುವುದು, ಉಸಿರಾಟದಲ್ಲಿ ತೊಂದರೆ ಇವೆಲ್ಲಾ ಕೂಡ ಕೊರೊನಾವೈರಸ್ ಲಕ್ಷಣವಾಗಿದೆ ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕರು ಹೇಳಿದ್ದಾರೆ. ಕೊರೊನಾವೈರಸ್ ಲಕ್ಷಣಗಳನ್ನು ಸಂಶೋಧನೆ ಮಾಡಿದ ಸಂಶೋಧಕರು 6 ಭಿನ್ನ ಲಕ್ಷಣಗಳ ಬಗ್ಗೆ ಹೇಳಿದ್ದಾರೆ ನೋಡಿ:
#covid19 #coronavirus #coronavirussymptoms #covid19symptoms
#covid19 #coronavirus #coronavirussymptoms #covid19symptoms
Category
🛠️
Lifestyle