News Cafe | Indian Women Clinch Silver In Cricket At Commonwealth Games 2022 | HR Ranganath | Aug 8, 2022

  • 2 years ago
ಕಾಮನ್‍ವೆಲ್ತ್ ಗೇಮ್ಸ್‍ನ ಟಿ20 ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಚಿನ್ನ ಕೈತಪ್ಪಿದ್ದು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ಗುರಿ ನೀಡಿತು. ಗುರಿ ಬೆನ್ನಟ್ಟಿದ ಭಾರತ ತಂಡ 10 ವಿಕೆಟ್ ನಷ್ಟಕ್ಕೆ 152 ರನ್ ಹೊಡೆಯಲಷ್ಟೇ ಶಕ್ತವಾಯಿತು. ತಂಡ ನಾಯಕಿ ಹರ್ಮನ್ ಪ್ರೀತ್ ಕೌರ್ 65 ರನ್ ಹೊಡೆದರು. ಇನ್ನು, ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ 4-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಕೊನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಭಾರತ, 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಪೇರಿಸಿತು. ವೆಸ್ಟ್ ಇಂಡೀಸ್ ತಂಡವನ್ನು 15.4 ಓವರ್‍ಗಳಲ್ಲಿ 100 ರನ್‍ಗೆ ಆಲೌಟ್ ಮಾಡಿತು. ಈ ಮಧ್ಯೆ, ಇದೇ 27ರಿಂದ ಆರಂಭವಾಗುವ ಏಷ್ಯಾಕಪ್ ಟೂರ್ನಿಗೆ ಇಂದು ಟೀಂ ಇಂಡಿಯಾ ಪ್ರಕಟವಾಗಲಿದೆ.

#publictv #newscafe #hrranganath

Recommended