#NammaBankuKannadaBeku Twitter Campaign Starts On July 11th, 6 pm | Oneindia Kannada

  • 7 years ago
Kannada Grahaka Koota has made many twitter campaigns to protect Kannada language from other language imposition. Now it has started a new twitter campaign, named #NammaBankuKannadaBeku. The campaign will be started on July 11th, 6 pm. People can support the campaign by tweeting under #NammaBankuKannadaBeku hashtag. The aim of the campaign is to requesting banks to use Kannada language in their services.

ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವವರೇ ಕಡಿಮೆ ಎಂಬಂತಾಗಿರುವುದು ಹೊಸ ವಿಷಯವಲ್ಲ. ಕನ್ನಡ ಬಂದರೂ, ಮಾತನಾಡುವುದಕ್ಕೆ ಮುಜುಗರಪಡುವವರಿದ್ದಾರೆ. ಕನ್ನಡವನ್ನು ಬದಿಗಿಟ್ಟು, ಇಂಗ್ಲಿಷನ್ನೇ ನೆಚ್ಚಿಕೊಳ್ಳುವ ಕೆಲವರ ಶೋಕಿಯಿಂದಾಗಿ ಕರ್ನಾಟಕದಲ್ಲಿ ಕನ್ನಡದ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ. ಹೀಗಿರುವಾಗ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸುವ ಬ್ಯಾಂಕ್ ಗಳಲ್ಲಿ ಕನ್ನಡವನ್ನೇ ಸಂವಹನ ಭಾಷೆಯನ್ನಾಗಿ ಬಳಸುವಂತೆ ಮಾಡುವ ಸಲುವಾಗಿ ಕನ್ನಡ ಗ್ರಾಹಕ ಕೂಟ(KGK)ವು #NammaBankuKannadaBeku ಎಂಬ ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ. ಜುಲೈ 11, ಮಂಗಳವಾರ ಸಂಜೆ 6 ಗಂಟೆಯಿಂದ ನಡೆಯಲಿರುವ ಈ ಟ್ವಿಟ್ಟರ್ ಅಭಿಯಾನದಲ್ಲಿ, ಹೆಚ್ಚು ಹೆಚ್ಚು ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೇಮಿಗಳು ಸಹಕರಿಸಬೇಕೆಂದು ಕೂಟ ಮನವಿ ಮಾಡಿಕೊಂಡಿದೆ.

Recommended