• 8 years ago
ಭಾರತವು ಸಾಂಬಾರ ಪದಾರ್ಥಗಳ ತವರು ಎಂದರೆ ಯಾವುದೇ ತಪ್ಪಿಲ್ಲ ಬಿಡಿ. ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತೀಯರು ಸಾಂಬಾರ ಪದಾರ್ಥಗಳನ್ನು ಬಳಸುತ್ತಾ ಬಂದಿದ್ದಾರೆ. ಇದರಲ್ಲಿ ಇರುವಂತಹ ಕೆಲವೊಂದು ಔಷಧೀಯ ಗುಣಗಳಿಂದಾಗಿ ಇವುಗಳನ್ನು ಆಯುರ್ವೇದದಲ್ಲೂ ಔಷಧಿಗಳಿಗೆ ಬಳಲಾಗುತ್ತಾ ಇದೆ. ವಿದೇಶದದಿಂದ ಬಂದಂತಹ ಹಲವಾರು ಮಂದಿ ವ್ಯಾಪಾರಿಗಳು ಹಾಗೂ ಪ್ರವಾಸಿಗರು ಭಾರತದ ಸಾಂಬಾರ ಪದಾರ್ಥಗಳನ್ನು ಕೊಂಡುಹೋಗಿ ತಮ್ಮ ದೇಶಗಳಲ್ಲಿ ಪರಿಚಯಿಸಿದ್ದಾರೆ. ದಕ್ಷಿಣ ಏಶ್ಯಾ ಅದರಲ್ಲೂ ಭಾರತದಲ್ಲಿ ವಿದೇಶಿಗರು ಅರಿಶಿನವನ್ನು ಕಂಡು ಹಿಡಿದರು ಎಂದು ಹೇಳಲಾಗುತ್ತದೆ. ಇದರಲ್ಲಿರುವ ಹಲವಾರು ರೀತಿಯ ಔಷಧೀಯ ಗುಣಗಳಿಂದ ಇದನ್ನು ಆಯುರ್ವೇದದೊಂದಿಗೆ ಅಡುಗೆಯಲ್ಲೂ ಬಳಸಲಾಗುತ್ತದೆ. ಭಾರತೀಯರು ತಮ್ಮ ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಅರಿಶಿನ ಬಳಸುವರು. ಅರಿಶಿನವನ್ನು ಕೆಲವೊಂದು ಧಾರ್ಮಿಕ ಚಟುವಟಿಕೆಗಳಲ್ಲಿ ಬಳಸುವ ಕಾರಣದಿಂದ ಇದನ್ನು ಪವಿತ್ರವೆಂದು ನಂಬಲಾಗುತ್ತದೆ. ಯಾವುದೇ ರೀತಿಯ ಗಾಯದಿಂದ ಹಿಡಿದು ದೊಡ್ಡ ಮಟ್ಟದ ಕ್ಯಾನ್ಸರ್ ಅನ್ನು ತಡೆಯುವಂತಹ ಶಕ್ತಿ ಅರಿಶಿನಕ್ಕೆ ಇದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಭಾರತದಲ್ಲಿ ಹೆಚ್ಚಾಗಿ ಅರಿಶಿನವನ್ನು ಅಡುಗೆಯಲ್ಲಿ ಅಥವಾ ಬಿಸಿ ಹಾಲು ಅಥವಾ ಬಿಸಿ ನೀರಿಗೆ ಹಾಕಿ ಕುಡಿಯಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಅರಿಶಿನ ಚಹಾವು ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಅರಿಶಿನ ಚಹಾದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.

Recommended