• 8 years ago
ಸ್ಟೈಲ್ ಕಿಂಗ್ ರಜನಿಕಾಂತ್ ಅಭಿನಯದ '2.0' ಸಿನಿಮಾದ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ನಿರ್ದೇಶಕ ಶಂಕರ್ ಮತ್ತು ರಜನಿಕಾಂತ್ ಮತ್ತೆ ಈ ಚಿತ್ರದಲ್ಲಿ ಒಂದಾಗಿದ್ದು, ಸಿನಿಮಾ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿದೆ. ರಜನಿ '2.0' ಸಿನಿಮಾ ಬರುತ್ತಿರುವ ಕಾರಣ ಯಾವ ಭಾಷೆಯ ಚಿತ್ರಗಳು ಅದರ ಮುಂದೆ ನಿಲ್ಲುವ ಧೈರ್ಯ ಮಾಡುತ್ತಿಲ್ಲ. ಆದರೆ ಕನ್ನಡದ ಒಂದು ಸಿನಿಮಾ ಈಗ '2.0' ಬಿಡುಗಡೆಯಾಗುತ್ತಿರುವ ದಿನವೇ ಫೀಲ್ಡ್ ಗೆ ಇಳಿಯುತ್ತಿದೆ. ಈ ಮೂಲಕ ಆ ಸಿನಿಮಾ ನೇರವಾಗಿ ರಜನಿ ಚಿತ್ರಕ್ಕೆ ಪೈಪೋಟಿ ನೀಡುವುದಕ್ಕೆ ಸಿದ್ಧವಾಗಿದೆ. ಕನ್ನಡದ 'ರಾಜರಥ' ಸಿನಿಮಾದ ಬಿಡುಗಡೆಯ ದಿನಾಂಕ ಇದೀಗ ಅನೌನ್ಸ್ ಆಗಿದೆ. ಈ ಚಿತ್ರದ ಜನವರಿ 25ಕ್ಕೆ ದೇಶಾದ್ಯಂತ ತೆರೆಗೆ ಬರಲಿದೆ.ಈ ಹಿಂದೆಯೇ ಹಾಕಿದ ಲೆಕ್ಕಾಚಾರದಂತೆ '2.0' ಸಿನಿಮಾ 2018ರ ಜನವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ, '2.0' ಮತ್ತು 'ರಾಜರಥ' ಚಿತ್ರದ ನಡುವೆ ಜಿದ್ದಾಜಿದ್ದಿ ನಡೆಯಲಿದೆ.ಅಕ್ಷಯ್ ಕುಮಾರ್ ನಟನೆಯ 'ಪ್ಯಾಡ್ ಮ್ಯಾನ್' ಚಿತ್ರ ಕೂಡ ಜನವರಿ 26ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ '2.0' ದಿಂದ ಈ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ.


Kannada Movie 'Rajaratha' is all set to release on January 25th 2018."Rajani 2.0" is getting a huge fight from this kannada movie ,.watch this video

Category

🗞
News

Recommended