ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ತಕರಾರು : ಚುನಾವಣೆಯನ್ನ ಬಹಿಷ್ಕರಿಸಲು ಹೊರಟಿದೆ ಕಾಂಗ್ರೆಸ್ | Oneindia Kannada

  • 7 years ago
Top opposition leaders are planning boycott the upcoming Karnataka Assembly election to pressure the Election Commission to abandon Electronic Voting Machines which they claim are being rigged in favor of the BJP.


ಆಡಳಿತ ಯಂತ್ರವನ್ನು ಬಳಸಿಕೊಂಡು ಬಿಜೆಪಿ ಇವಿಎಂ ಅನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ವಿರೋಧ ಪಕ್ಷಗಳ ಕೂಗು, ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ ಹೊಸ ರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಬ್ಯಾಲೆಟ್ ಪೇಪರ್ ಬಳಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲು ವಿರೋಧ ಪಕ್ಷಗಳು ಮಾತುಕತೆ ನಡೆಸುತ್ತಿದ್ದು, ಒಂದು ವೇಳೆ ಇವಿಎಂ ಅನ್ನೇ ಬಳಸಿದರೆ, ಕರ್ನಾಟಕ ಚುನಾವಣೆಯನ್ನೇ ಬಹಿಷ್ಕರಿಸಲು ವಿರೋಧ ಪಕ್ಷಗಳು ಚಿಂತನೆ ನಡೆಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣಾ ಫಲಿತಾಂಶದ ನಂತರ ಆರಂಭವಾದ ಇವಿಎಂ ಲೋಪದೋಷಗಳ ಬಗೆಗಿನ ಚರ್ಚೆ, ಮೊನ್ನೆಮೊನ್ನೆ ಹೊರಬಿದ್ದ ಉತ್ತರಪ್ರದೇಶದ ಸ್ಥಳೀಯ ಸಂಸ್ಥೆಯ ರಿಸಲ್ಟ್ ನಂತರ ತಾರಕಕ್ಕೇರಿದೆ. ಮೂಲಗಳ ಪ್ರಕಾರ ವಿರೋಧ ಪಕ್ಷಗಳ ಕೆಲವು ಮುಖಂಡರು ಕಾಂಗ್ರೆಸ್ ಜೊತೆ ಕೂಡಾ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.ಯುಪಿಎ ಮೈತ್ರಿಕೂಟದ ಹಲವು ಸದಸ್ಯರು ಮತ್ತು ಇತರ ವಿರೋಧ ಪಕ್ಷಗಳು ಒಂದಾಗಿ, ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದು, ಕಾಂಗ್ರೆಸ್ ಹೈಕಮಾಂಡಿನ ನಿರ್ಧಾರಕ್ಕೆ ಕಾಯುತ್ತಿದೆ ಎನ್ನುವ ಮಾಹಿತಿಯಿದೆ.

Category

🗞
News

Recommended