• 8 years ago
ಕನ್ನಡದ ಸ್ಟಾರ್ ನಟರು ಈಗ ಬರಿ ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಹೀರೋ ಆಗಿದ್ದರೂ ಒಂದು ಸಿನಿಮಾದ ಉಳಿದ ವಿಭಾಗಳಲ್ಲಿ ಕೂಡ ಕೆಲಸ ಮಾಡಿ ಗೆಲ್ಲುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರವಿಚಂದ್ರನ್, ಉಪೇಂದ್ರ, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಎಲ್ಲರೂ ಈಗ ಸಿನಿಮಾ ನಿರ್ಮಾಪಕ, ನಿರ್ದೇಶಕರಾಗಿಯೂ ಕೂಡ ಯಶಸ್ಸು ಗಳಿಸುತ್ತಿದ್ದಾರೆ. ನಾಯಕರಾಗಿ ಎಷ್ಟೇ ಬಿಜಿ ಇದ್ದಾರು ಈ ನಟರು ಸಿನಿಮಾ ಮೇಕಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಬಹುತೇಕ ನಟರು ಈಗ ಬರಿ ನಟನೆ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನಾಗುವುದಕ್ಕಿಂತ ಮುಂಚೆ ಒಬ್ಬ ನಿರ್ದೇಶಕ. ನಿರ್ದೇಶಕನಾಗಿ ಹೆಸರು ಮಾಡಿದ ಮೇಲೆ ಉಪೇಂದ್ರ ಹೀರೋ ಆದರು. ಸಿನಿಮಾ ನಿರ್ದೇಶನ, ನಿರ್ಮಾಣ, ಗಾಯನ, ಸಂಭಾಷಣೆ, ಸಾಹಿತ್ಯ ಹೀಗೆ ಎಲ್ಲ ವಿಭಾಗಳಲ್ಲಿಯೂ ಉಪ್ಪಿ ಕೆಲಸ ಮಾಡಿದ್ದಾರೆ.
Kannada actor Ravichandran, Upendra, Puneeth Rajkumar, Darshan are Multi Talented Actors. Watch Video to know more.

Recommended