• 8 years ago
'ಓಂ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸರ್ವಾಕಾಲಿಕ ದಾಖಲೆಯ ನಿರ್ಮಿಸಿರುವ ಸಿನಿಮಾ. ಈ ಸಿನಿಮಾ ಈಗ ಯೂಟ್ಯೂಬ್ ನಲ್ಲಿ ಬಂದಿದೆ. ಶ್ರೀ ಗಣೇಶ್ ವಿಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈಗ 'ಓಂ' ಸಂಪೂರ್ಣ ಸಿನಿಮಾ ಲಭ್ಯವಿದೆ.'ಓಂ' ಸಿನಿಮಾದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಅದೊಂದು ಮಾಸ್ಟರ್ ಫೀಸ್ ಸಿನಿಮಾ. ಹಿಂದೆ ಬಂದಿಲ್ಲ ಮುಂದೆ ಬರಲ್ಲ ಅಂತ್ತಾರಲ್ಲ ಆ ರೀತಿ... ಡೈರೆಕ್ಟರ್ ಕ್ಯಾಪ್ ತೊಟ್ಟ ಉಪೇಂದ್ರ ಈ ಚಿತ್ರದಲ್ಲಿ ಜಾದು ಮಾಡಿದ್ದರು. ಶಿವರಾಜ್ ಕುಮಾರ್ ಸತ್ಯನಾಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈಗ ರಿಲೀಸ್ ಆದರು ಹೌಸ್ ಫುಲ್ ಬೋರ್ಡ್ ಬೀಳುವ ಪವರ್ ಈ ಸಿನಿಮಾಗೆ ಇದೆ. ಜೊತೆಗೆ ಭಾರತದಲ್ಲಿಯೇ ಮೊದಲ ಅಂಡರ್ ವಲ್ಡ್ ಸಿನಿಮಾ ಇದಾಗಿದೆ.ಇಷ್ಟು ದಿನ ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 550ಕ್ಕೂ ಹೆಚ್ಚು ಬಾರಿ ಈ ಸಿನಿಮಾ ರಿ ರಿಲೀಸ್ ಆಗಿತ್ತು. ಉದಯ ಟಿವಿಯಲ್ಲಿಯೂ ಸಿನಿಮಾ ಪ್ರಸಾರ ಆಗಿತ್ತು. ಆದರೆ ಈಗ ಇದೇ ಮೊದಲ ಬಾರಿಗೆ ಸಿನಿಮಾ ಯೂ ಟ್ಯೂಬ್ ಗೆ ಎಂಟ್ರಿ ಕೊಟ್ಟಿದೆ. ಇನ್ನು 'ಓಂ' ಚಿತ್ರ ರಾಜ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಪ್ರೇಮ ಚಿತ್ರದಲ್ಲಿ ನಾಯಕಿ ಆಗಿದ್ದರು.

Category

🗞
News

Recommended