• 8 years ago
ಸೃಜನ್ ಲೋಕೇಶ್ ಅವರಿಗೆ ನಟಿ ರಚಿತಾ ರಾಮ್ ''ಕಾಲು ಎಳೆಯುವುದು ಬೇಡ'' ಎಂದಿದ್ದಾರೆ. ಆದರೆ ರಚಿತಾ ಈ ರೀತಿ ಹೇಳಿರುವುದು ರಿಯಲ್ ಆಗಿ ಅಲ್ಲ.. ಹೊಸ ಕಾರ್ಯಕ್ರಮವೊಂದರ ಪ್ರೋಮೋದಲ್ಲಿ. ರಚಿತಾ ರಾಮ್ ಮತ್ತು ಸೃಜನ್ ಇಬ್ಬರು ಈಗ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. 'ಕಾಮಿಡಿ ಟಾಕೀಸ್' ಹೆಸರಿನ ಈ ಕಾರ್ಯಕ್ರಮದಲ್ಲಿ ಈ ಇಬ್ಬರು ತೀರ್ಪುಗಾರರಾಗಿದ್ದಾರೆ. ಇನ್ನು ಈ ಕಾರ್ಯಕ್ರಮದ ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಸಖತ್ ಫನ್ನಿ ಆಗಿದೆ. 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಪ್ರೋಮೋ ನೋಡುಗರಿಗೆ ನಗು ತರಿಸುತ್ತಿದೆ.ಪ್ರೋಮೋವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಇಲ್ಲಿ ಕ್ಯಾಮರಾ ಮುಂದೆ ಸೃಜನ್ ಹೊಗಳುವ ರಚಿತಾ ಕ್ಯಾಮರಾ ಆಫ್ ಆದ ಮೇಲೆ ಅವರಿನ್ನು ಬೈದಿದ್ದಾರೆ. ಈ ರೀತಿ ತುಂಬ ತಮಾಷೆಯಾಗಿ ಪ್ರೋಮೋ ಇದೆ.ಈ ಹಿಂದೆ ಸೃಜನ್ ಅವರ ಇದೇ ರೀತಿಯ ಪ್ರೋಮೋ ಕೂಡ ಬಂದಿದ್ದು, ಅಲ್ಲಿ ರಚಿತಾ ರಾಮ್ ಗೆ ಸೃಜನ್ ಬೈದಿದ್ದರು.

Category

🗞
News

Recommended