• 6 years ago
We have come to bake various varieties of bread over the past 30,000 years. According to the modern-day lifestyle, bread is considered unhealthy despite the fact that it is consumed by 65% of individuals as an important part of their diet. Consumption of bread every day has various drawbacks. Like, an increased blood sugar, coeliac disease, a higher consumption of fructose, a diet of higher calories but low essential nutrients, a raise in bad cholesterol, etc. So, what is the effect of bread on loose motions? So watch this video to know about The Effect Of Bread On Loose Motions?
ಸರಿ ಸುಮಾರು 30,000ಕ್ಕಿಂತಲೂ ಹೆಚ್ಚು ವರ್ಷಗಳಿಂದ ಬ್ರೆಡ್‍ಅನ್ನು ಸೇವಿಸುತ್ತಾ ಬಂದಿದ್ದೇವೆ. ಆಧುನಿಕ ಜೀವನ ಶೈಲಿಯಲ್ಲಿ ಮುಳುಗಿರುವವರು ಅಂದರೆ ಒಂದು ಅಂಕಿ ಅಂಶದ ಪ್ರಕಾರ ಶೇ.65ರಷ್ಟು ಜನರ ಪ್ರಮುಖ ಆಹಾರವೇ ಬ್ರೆಡ್ ಆಗಿದೆ ಎಂದರೆ ತಪ್ಪಾಗಲಾರದು. ಬ್ರೆಡ್ ಕೆಲವು ರೀತಿಯಲ್ಲಿ ಆರೋಗ್ಯಕರವಾದ ತಿನಿಸು ಅಥವಾ ಆಹಾರ ಪದಾರ್ಥ ಎಂದು ಹೇಳಲಾಗುತ್ತದೆ. ಆದರೂ ಗಣನೀಯವಾಗಿ ಬ್ರೆಡ್ ಸೇವನೆ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವವಾಗುವುದು. ಬ್ರೆಡ್ ಸಂಸ್ಕರಿಸಿದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಬರುತ್ತದೆ. ಒತ್ತಡದ ಬದುಕು ಅಥವಾ ಗಡಿಬಿಡಿಯ ಜೀವನ ಶೈಲಿಯಲ್ಲಿ ಬ್ರೆಡ್ ಸೇವನೆ ಸರಳ ಹಾಗೂ ಸುಲಭ ವಿಧಾನವಾಗಿದೆ. ಇದರಿಂದ ಅಷ್ಟೇ ಸುಲಭವಾಗಿ ರಕ್ತದೊತ್ತಡ, ಉದರ ಕಾಯಿಲೆ, ಫ್ರಕ್ಟೋಸ್, ಕೊಲೆಸ್ಟ್ರಾಲ್, ಅಧಿಕ ಕ್ಯಾಲೋರಿ, ಅನಗತ್ಯ ಪೋಷಕಾಂಶಗಳು, ಮಲಬದ್ಧತೆಯಂತಹ ಸಮಸ್ಯೆಗಳು ಕಾಡುತ್ತವೆ.

Category

🗞
News

Recommended