ದೇಶಿಯ ಮಾರುಕಟ್ಟೆಯಲ್ಲಿ IPL ಹವಾ ಜೋರಾಗಿದೆ. ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳ ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ. ಹೊಸ ಆಫರ್ ಗಳು, ಹೆಚ್ಚಿನ ಡೇಟಾ ಸೇರಿದಂತೆ ಹಲವು ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಟೆಲಿಕಾಂ ದೈತ್ಯ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಕ್ರಿಕೆಟ್ ಗೋಲ್ಡ್ ಪಾಸ್ ಆಫರ್ ವೊಂದನ್ನು ಲಾಂಚ್ ಮಾಡಿದೆ. ಈ ಮೂಲಕ ಬಳಕೆದಾರರಿಗೆ IPL ನೋಡುವ ಅನುಭವನ್ನು ಹೆಚ್ಚು ಮಾಡಲಿದೆ.ಈ ಬಾರಿ ಐಪಿಎಲ್ ಅನ್ನು ಟಿವಿಯಿಂದ ಸ್ಮಾರ್ಟ್‌ಫೋನ್‌ಗೆ ವರ್ಗಾಹಿಸಲು ಮುಂದಾಗಿರುವ ಜಿಯೋ, ತನ್ನ ಬಳಕೆದಾರರಿಗೆ ರೂ.251 ಪ್ಲಾನ್ ಘೋಷಣೆ ಮಾಡಿದೆ. ಇದಕ್ಕೆ ಜಿಯೋ ಕ್ರಿಕೆಟ್ ಗೋಲ್ಡ್ ಪಾಸ್ ಎಂದು ನಾಮಕರಣವನ್ನು ಮಾಡಿದ್ದು, ಇಡೀ IPL ಟೂರ್ನಿ ಮುಗಿಯುವ ವರೆಗೂ ಡೇಟಾವನ್ನು ನೀಡುವ ಆಫರ್ ಇದಾಗಿದೆ.
Category
🤖
Tech