• 7 years ago
Kannada electronic media is abuzz with many developments. Star Sports India direct feed will be made available in Kannada now next editions of #IPL commentary will be in #Kannada,some prominent journalists are jumping from this channel to that and many more news from across the media houses in Karnataka.

ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಈ ವಾರದ ವಾರೆ ನೋಟ ಇಲ್ಲಿದೆ. ಕನ್ನಡದಲ್ಲಿ ಕ್ರೀಡಾ ಚಾನೆಲ್ ತರಲು ಸ್ಟಾರ್ ಸ್ಫೋರ್ಟ್ಸ್ ಇಂಡಿಯಾ ಮುಂದಾಗಿರುವುದು ಸದ್ಯದ ಬಿಗ್ ಬ್ರೇಕಿಂಗ್ ಸುದ್ದಿ. ಮಿಕ್ಕಂತೆ ಈ ವಾರವೂ ಮೇಲಕ್ಕೇರದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ, ಬಾರ್ಕ್ ರಿಪೋರ್ಟ್, ಸ್ವಾಮೀಜಿ ರಾಸಲೀಲೆ ಪ್ರಸಾರ, ಸುಮ್ ಸುಮ್ನೆ ಚರ್ಚೆ ಎಲ್ಲವೂ ಟಿವಿ ಮಾಧ್ಯಮಗಳಲ್ಲಿ ನಡೆದು ಹೋಗಿವೆ.ನ್ಯೂಸ್ 18 ಕನ್ನಡ(ಈ ಹಿಂದಿನ ಈಟಿವಿ ಕನ್ನಡ) ಬಿಟ್ಟ ಬಳಿಕ ಪ್ರಮುಖ ಆಂಕರ್ ಸೋಮಣ್ಣ ಮಾಚಿಮಾಡ ಅವರು ಕೂಡಾ ಎಬಿಪಿಯ ಚಾನೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ ನಿಂದ ಜನಶ್ರೀ ನೇಮಕಾತಿ ಆರಂಭವಾಗಲಿದ್ದು, ಹೊಸ ವಿನ್ಯಾಸ, ಹೊಸ ಮ್ಯಾನೇಜ್ಮೆಂಟ್ ನೊಂದಿಗೆ ಮತ್ತೆ ಚಾನೆಲ್ ಮೇಲಕ್ಕೇರಲಿದೆ ಎಂಬ ಸುದ್ದಿಯಲ್ಲಿ ಯಾವುದೇ ಬದಲಾವಣೆ ಇಲ್ಲ .ಆದರೆ, ಚಾನೆಲ್ ಹೆಸರು,ಸ್ವರೂಪದಲ್ಲಿ ತಕ್ಕಮಟ್ಟಿನ ಹೊಸತನ ಕಾಣಬಹುದಾಗಿದೆ. ಚಾನೆಲ್ ವಿ ಇನ್ಮುಂದೆ ನವೆಂಬರ್ 16, 2017 (00.001 ಗಂಟೆಯಿಂದ) ರಿಂದ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಎಂದು ಪ್ರಸಾರಗೊಳ್ಳಲಿದೆ ಎಂದು ಸ್ಟಾರ್ ಇಂಡಿಯಾ ಪ್ರೈ ಲಿಮಿಟೆಡ್ ವರದಿ ಮಾಡಿದೆ.

Category

🗞
News

Recommended