ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಕಾರಿನ ಫಸ್ಟ್ ಲುಕ್ ಹಾಗೂ ವಾಕ್‌ರೌಂಡ್

  • 4 years ago
ಪೋರ್ಷೆ ಕಂಪನಿಯು ತನ್ನ ಪನಾಮೆರಾ ಕಾರನ್ನು ಜಾಗತಿಕ ಮಾರುಕಟ್ಟೆಗಳಲ್ಲಿ 2009ರಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರು ವಿಶ್ವದಾದ್ಯಂತ ಅನೇಕ ಮಾರುಕಟ್ಟೆಗಳಲ್ಲಿ 2.50 ಲಕ್ಷ ಯೂನಿಟ್‌ಗಳ ಮಾರಾಟವನ್ನು ಕಂಡಿದೆ.

ಈ ಐಷಾರಾಮಿ ಕಾರಿನ 10 ವರ್ಷಗಳ ಉತ್ಪಾದನೆಯನ್ನು ಆಚರಿಸಲು ಈ ವರ್ಷದ ಆರಂಭದಲ್ಲಿ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಲಾಯಿತು.

ಪೋರ್ಷೆ ಇಂಡಿಯಾ ಈ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.60 ಕೋಟಿಗಳಾಗಿದೆ.

ಭಾರತದ ಮೊದಲ ಪನಾಮೆರಾ 4 10 ಇಯರ್ಸ್ ಎಡಿಷನ್ ಕಾರನ್ನು ಇತ್ತೀಚೆಗೆ ಬೆಂಗಳೂರಿನ ಪೋರ್ಷೆ ಕೇಂದ್ರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ವಿಶೇಷ ಆವೃತ್ತಿಯ ಈ ಕಾರಿನ ಫಸ್ಟ್ ಲುಕ್ ಹಾಗೂ ವಾಕ್‌ರೌಂಡ್ ಅನ್ನು ಈ ವೀಡಿಯೊದಲ್ಲಿ ನೋಡೋಣ

Recommended