‘ರಾಧಾ ರಮಣ’ ಸೀರಿಯಲ್‍ನಿಂದ ಹೊರಬಂದ ರಾಧಾ ಮಿಸ್..! | Shwetha Prasad Quits Radha Ramana Serial..!

  • 3 years ago
‘ರಾಧಾ ರಮಣ’ ಸೀರಿಯಲ್‍ನಿಂದ ಹೊರಬಂದ ರಾಧಾ ಮಿಸ್..! | Shwetha Prasad Quits Radha Ramana Serial..!

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ರಾಧಾ ರಮಣ’ ಧಾರಾವಾಹಿ ಪ್ರೇಕ್ಷಕರ ಮನಗೆದ್ದಿತ್ತು. ಆದರೆ ರಾಧಾ ಪಾತ್ರಧಾರಿಯಾಗಿ ಅಭಿನಯಿಸಿದ್ದ ಶ್ವೇತಾ ಪ್ರಸಾದ್ ಅವರು ಸೀರಿಯಲ್‍ನಿಂದ ಹೊರಬರುತ್ತಿದ್ದಾರೆ.

ನಟಿ ಶ್ವೇತಾ ಪ್ರಸಾದ್ ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿಲ್ಲ. ಶ್ವೇತಾ ಅವರು ಸೀರಿಯಲ್‍ನಲ್ಲಿ ರಮಣ ಪಾತ್ರಧಾರಿಗೆ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ಇದರಿಂದ ಅಪಾರ ಪ್ರೇಕ್ಷಕರು ಇವರನ್ನು ಮೆಚ್ಚಿಕೊಂಡಿದ್ದರು. ಆದರೆ ಇದೀಗ ಈ ಧಾರಾವಾಹಿಯಿಂದ ಶ್ವೇತಾ ಅವರು ಹೊರ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧಾರಾವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿದೆ. ಹೀಗಾಗಿ ಇದೇ ಕಾರಣದಿಂದ ಶ್ವೇತಾ ಸೀರಿಯಲ್‍ನಿಂದ ಹೊರ ಬರುವ ನಿರ್ಧಾರ ಮಾಡಿದ್ದರಂತೆ. ಶ್ವೇತಾ ಧಾರಾವಾಹಿ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ

ಧಾರಾವಾಹಿಯಲ್ಲಿ ಇನ್ನೂ 15 ದಿನಗಳು ಮಾತ್ರ ಶ್ವೇತಾ ಅವರು ಕಾಣಿಸಿಕೊಳ್ಳಲಿದ್ದಾರೆ. ನಂತರ ಆ ಪಾತ್ರಕ್ಕೆ ಬೇರೆ ನಟಿ ಬರುತ್ತಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಅವರು ನಟನೆಯಿಂದ ಸ್ವಲ್ಪ ದಿನದವರೆಗೂ ಬ್ರೇಕ್ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.

For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv

Recommended