• 3 months ago
ಪಲ್ಲೆಕೆಲೆಯ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 20 ಓವರ್​ಗಳಲ್ಲಿ 161 ರನ್ ಕಲೆಹಾಕಿತು. ಇತ್ತ ಭಾರತದ ಇನಿಂಗ್ಸ್ ಆರಂಭಕ್ಕೂ ಮಳೆ ಬಂದಿದ್ದರಿಂದ, ಓವರ್​ಗಳ ಕಡಿತ ಮಾಡಲಾಯಿತು. ಅದರಂತೆ 8 ಓವರ್​ಗಳಲ್ಲಿ 78 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ 6.3 ಓವರ್​ಗಳಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದೆ. ಇದೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ವಿಶೇಷ ಮೈಲುಗಲ್ಲು ದಾಟಿರುವುದು ವಿಶೇಷ.

Category

🥇
Sports

Recommended