Skip to playerSkip to main contentSkip to footer
  • 2 days ago
ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್​ ಕಡಲತೀರದಲ್ಲಿ ದೋಣಿ ವಿಹಾರ ಮಾಡುತ್ತಿದ್ದ ವೇಳೆ ದೋಣಿಯ ಎಂಜಿನ್ ಕೆಟ್ಟು ದೊಡ್ಡ ಅಲೆಯೊಂದಕ್ಕೆ ದೋಣಿ ಮಗುಚಿಬಿದ್ದ ಘಟನೆ ಘಟನೆ ಶುಕ್ರವಾರ ಸಂಜೆ ನಡೆದಿದೆ. ದೋಣಿಯಲ್ಲಿದ್ದ ನಾಲ್ವರು ಪ್ರವಾಸಿಗರು ಅದೃಷ್ಟವಶಾತ್ ಪಾರಾಗಿದ್ದಾರೆ.ಶಾಲಾ ಕಾಲೇಜುಗಳಿಗೆ ರಜೆ ಹಿನ್ನೆಲೆಯಲ್ಲಿ ಕಡಲ ತೀರಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ಕಾರವಾರದ ಟ್ಯಾಗೋರ್ ಕಡಲ ತೀರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಪ್ರವಾಸಿಗರು ದೋಣಿ ವಿಹಾರ ಮಾಡಲು ಮುಂದಾಗಿದ್ದಾರೆ‌. ದೋಣಿ ವಿಹಾರ ನಡೆಸಿ ದಡಕ್ಕೆ ವಾಪಾಸ್​ ಆಗುವ ವೇಳೆಯಲ್ಲಿ ದೋಣಿಯ ಎಂಜಿನ್ ಕೆಟ್ಟಿದೆ. ದೋಣಿಯ ಚಾಲಕ ಎಂಜಿನ್ ಸ್ಟಾರ್ಟ್ ಮಾಡಲು ಯತ್ನಿಸಿದ್ದು ಫಲ ಕೊಡಲಿಲ್ಲ. ಎದೆಯೆತ್ತರದವೆರೆಗಿನ ನೀರಿನಲ್ಲಿ ದೋಣಿ ಇದ್ದ ಕಾರಣ ಚಾಲಕ‌ ನೀರಿಗಿಳಿದು ತಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ‌ ಸಂಜೆಯಾಗಿದ್ದ ಕಾರಣ ದೊಡ್ಡ ಅಲೆಯೊಂದು ಅಪ್ಪಳಿಸಿ ದೋಣಿ ಮಗುಚಿ ಬಿದ್ದಿದೆ. ಬಳಿಕ ತಕ್ಷಣ ಮಗುಚಿದ ದೋಣಿಯನ್ನು ಚಾಲಕ ಸರಿಪಡಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ದಡದಲ್ಲಿದ್ದವರು ರಕ್ಷಣೆಗೆ ದಾವಿಸಿದರು. ದೋಣಿ ಸರಿಪಡಿಸಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ದೋಣಿಯಲ್ಲಿದ್ದ ನಾಲ್ವರು ಪ್ರವಾಸಿಗರ ಪೈಕಿ ಯಾರಿಗೂ ಹಾನಿಯಾಗಿಲ್ಲ ಎಂದು ದೋಣಿಯ ಮಾಲೀಕರು ತಿಳಿಸಿದ್ದಾರೆ. ಸದ್ಯ ದೋಣಿ ಮಗುಚಿಬಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದನ್ನೂ ಓದಿ: ಮಧ್ಯಪ್ರದೇಶ: ಮಟಟಿಲಾ ಅಣೆಕಟ್ಟಿನಲ್ಲಿ ದೋಣಿ ಮಗುಚಿ 7 ಜನರು ಸಾವು

Category

🗞
News
Transcript
00:00What is this?
00:02What is this?
00:04What is this?
00:10This is a lot of food.
00:30Oh
01:00I
01:02I
01:04I
01:06I
01:08I
01:10I
01:12I
01:14I
01:16I
01:18I
01:20I
01:22I
01:24I
01:26I
01:28I
01:30I
01:32I
01:34I
01:36I
01:38I
01:40I
01:42I
01:44I

Recommended