• 7 years ago
ಕನಕನ ಕಿಂಡಿ - ಪೇಜಾವರರ ವಾದಕ್ಕೆ ಬನ್ನಂಜೆ ಗೋವಿಂದಾಚಾರ್ಯರ ಬೆಳಕಿಂಡಿ! ಉಡುಪಿಯ ಕೃಷ್ಣ ಇದ್ದದ್ದೇ ಪಶ್ಚಿಮಕ್ಕೆ. ಅಲ್ಲಿರುವ ಅಷ್ಟ ಮಠಗಳೆಲ್ಲದರ ಮುಖ್ಯದ್ವಾರ ಪಶ್ಚಿಮಕ್ಕೇ ಇದೆ. ಉಡುಪಿ ಕೃಷ್ಣ ಮಠದ ರಚನೆಯನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿದರೆ ಖಾತ್ರಿ ಆಗಿಬಿಡುತ್ತದೆ, ಕೃಷ್ಣ ಪಶ್ಚಿಮಕ್ಕೆ ತಿರುಗುವ ಸಾಧ್ಯತೆ ಕೂಡ ಇಲ್ಲ ಎಂದರು ವಿದ್ವಾಂಸರು ಹಾಗೂ ಧಾರ್ಮಿಕ ಚಿಂತಕರಾದ ಬನ್ನಂಜೆ ಗೋವಿಂದಾಚಾರ್ಯರು. ಕನಕ ದಾಸರ ಭಕ್ತಿಗೆ ಮೆಚ್ಚಿ ಉಡುಪಿಯ ಕೃಷ್ಣ ಪಶ್ಚಿಮಕ್ಕೆ ತಿರುಗಿದ ಎಂಬ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಒನ್ಇಂಡಿಯಾ ಗೋವಿಂದಾಚಾರ್ಯರನ್ನು ಫೋನ್ ಮೂಲಕ ಸಂಪರ್ಕಿಸಿತು. ಆಗ ಪ್ರತಿಕ್ರಿಯೆ ನೀಡಿದ ಅವರು, ಕುರುಬರನ್ನು ಮೆಚ್ಚಿಸುವ ಸಲುವಾಗಿ ಇಂಥ ಮಾತುಗಳನ್ನು ಆಡಬಾರದು ಎಂದರು.ಇಷ್ಟು ಕಾಲ ಇಲ್ಲದ ವಾದಿರಾಜರ ಹಾಡಿನ ಪ್ರಸ್ತಾಪ ಈಗೆಲ್ಲಿಂದ ಬಂತು? ಮಧ್ವಾಚಾರ್ಯರ ಕಾಲದಿಂದ ಇರುವ ಉಡುಪಿಯ ಹಲವು ದೇವಾಲಯಗಳ ವಾಸ್ತುವನ್ನು ಗಮನಿಸಿದರೆ ವಾಸ್ತವ ಏನು ಎಂಬುದು ಗೊತ್ತಾಗುತ್ತದೆ ಎಂಬುದನ್ನೂ ತಿಳಿಸಿದ ಅವರು, ತಾವೇ ಬರೆದಿರುವ 'ಬನ್ನಂಜೆ ಬರಹಗಳು- 1' ಹಾಗೂ ಕನಕೋಪನಿಷತ್ ಪುಸ್ತಕಗಳ ಅಂಶಗಳನ್ನು ಬಳಸಿಕೊಳ್ಳಲು ಅನುಮತಿ ಕೂಡ ನೀಡಿದ್ದಾರೆ.
Kanakana Kindi - Did Udupi Temple deity Sri Krishna's Stone idol turned towards West? Demystifying a myth. Sanskrit Scholar Bannanje Govindacharya in conversation with Oneindia Kannada reporter Srinivasa Mata.

Category

🗞
News

Recommended