• 8 years ago
Kannada Actor Puneeth Rajkumar starrer Anjaniputra has been released today (December 21st). A Harsha directed the film, Rashmika Mandanna female lead opposite Puneeth Rajkumar, film received a good response on the first day of release.

'ರಾಜಕುಮಾರ' ಸಿನಿಮಾದ ನಂತರ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ಪವರ್ ಸ್ಟಾರ್ ಅವರನ್ನ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ 'ಅಂಜನಿಪುತ್ರ' ಹೇಳಿ ಮಾಡಿಸಿದ ಸಿನಿಮಾ. ತಾಯಿ ಮಗನ ವಾತ್ಸಲ್ಯ, ಮುದ್ದಾದ ಲವ್ ಸ್ಟೋರಿ ಜೊತೆಯಲ್ಲಿ ಕಂಪ್ಲೀಟ್ ಕಾಮಿಡಿ ಬಯಸುವ ಪ್ರೇಕ್ಷಕರಿಗೆ 'ಅಂಜನಿಪುತ್ರ' ಚಿತ್ರ ಮೋಸ ಮಾಡುವುದಿಲ್ಲ. ಅಭಿಮಾಗಳ ಸ್ಟೈಲ್ ನಲ್ಲಿ ಹೇಳುವುದಾದರೆ ಅಂಜನಿಪುತ್ರ ಪಕ್ಕಾ ಕಮರ್ಷಿಯಲ್ ಸಿನಿಮಾ.ಅಂಜನಿಪುತ್ರ....ತುಂಬು ಕುಟುಂಬದ ಕಥೆ. ನಾವು ಯಾರ ತಂಟೆಗೂ ಹೋಗುವುದಿಲ್ಲ ನಮ್ಮ ಕುಟುಂಬದ ತಂಟೆಗೆ ಬಂದರೆ ಸುಮ್ಮನೇ ಇರುವುದಿಲ್ಲ ಎಂಬ ಮಾತು ಈ ಚಿತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತೆ. ಸಮಾಜದ ಮುಂದೆ ಮುಖವಾಡ ಹಾಕಿಕೊಂಡು ಮೋಸ ಮಾಡುತ್ತಿದ್ದ ಖಳನಾಯಕನನ್ನ ಹೇಗೆ ನಾಶ ಮಾಡುತ್ತಾನೆ ಎನ್ನುವ ಸಿಂಪಲ್ ಕತೆಯೇ 'ಅಂಜನಿಪುತ್ರ'. ಚಿತ್ರದ ನಾಯಕ ವಿರಾಜ್ ಯಾವುದೋ ಸಣ್ಣ ಕಾರಣಕ್ಕಾಗಿ ತಾಯಿಯಿಂದ ದೂರವಾಗಿ ಬೆಂಗಳೂರಿನ ಮಾರುಕಟ್ಟೆಯ ಸಣ್ಣ ಮನೆಯಲ್ಲಿ ವಾಸವಿರುತ್ತಾನೆ. ಅನಿರೀಕ್ಷಿತವಾಗಿ ನಾಯಕಿಯ ಭೇಟಿಯಾಗಿ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತೆ. ತಾನೇ ಪ್ರೀತಿ ಹೇಳಿಕೊಳ್ಳಬೇಕು ಅನ್ನುವ ಮುಂಚೆಯೇ ನಾಯಕಿ ಮನದಲ್ಲೂ ನಾಯಕ ವಿರಾಜ್ ಮೇಲೆ ಪ್ರೀತಿ ಆಗುತ್ತೆ. ನಾಯಕ ಮನೆಯವರ ಜೊತೆಯಿಲ್ಲದೇ ಇರುವುದನ್ನೇ ಕಾದಿದ್ದ ಖಳನಾಯಕ ಬೈರವ, ಹೀರೋ ತಾಯಿ ಹಾಗೂ ಹಳ್ಳಿಯವರಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾನೆ. ಕಷ್ಟದ ಸಮಯದಲ್ಲಿ ತಾಯಿ ಅಂಜನಾದೇವಿಯ ಸಹಾಯಕ್ಕೆ ಬರುವನೇ ಅಂಜನಿಪುತ್ರ.

Category

🗞
News

Recommended