Kannada Actor Golden Star Ganesh and Kannada Actress Rashmika Mandanna starrer Chamak movie released state wide. The movie gets positive response from audience. Simple Suni has directed the movie. Chamak is a Family Entertainment story based movie.
ವರ್ಷದ ಕೊನೆಯ ಚಿತ್ರ ಚಮಕ್ ರಾಜ್ಯಾದ್ಯಂತ ರಿಲೀಸ್ ಆಗಿದೆ. ನಿರ್ದೇಶಕ ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಷ್ಮಿಕಾ ಈ ಮೂವರ ಕಾಂಬಿನೇಶನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಟೀಸರ್ ನಲ್ಲೇ ಚಮಕ್ ಕೊಟ್ಟಿದ್ದ ಡೈರೆಕ್ಟರ್ ಸುನಿ ಚಿತ್ರ ಪೂರ್ತಿ ತಮ್ಮ ಸ್ಟೈಲ್ ನಲ್ಲಿ ಚಮಕ್ ನೀಡಿದ್ದಾರೆ. ಸಿನಿಮಾದಲ್ಲಿ ಸ್ಪೆಷಲ್ ಆಗಿರೋ ಟ್ರೀಟ್ಮೆಂಟ್ ಸಿಗುತ್ತೆ ಅಂತ ಥಿಯೇಟರ್ ಒಳ ಹೋದ ಪ್ರೇಕ್ಷಕರು ಚಮಕ್ ತೆಗೆದುಕೊಂಡು ಹೊರ ಬರುತ್ತಿದ್ದಾರೆ.ಹೆರಿಗೆ ಡಾಕ್ಟರ್ ಆಗಿರುವ ನಾಯಕ ನಟನಿಗೆ ಮದುವೆ ಹೆಣ್ಣು ಹುಡುಕುವ ಕೆಲಸ ನಡೆಯುತ್ತಿರುತ್ತದೆ. ಸಾಲು ಸಾಲು ಹುಡುಗಿಯರನ್ನ ರಿಜೆಕ್ಟ್ ಮಾಡಿದ ನಂತರ ಖುಷ್ ಬಾಳಲ್ಲಿ ನಾಯಕಿ ಖುಷಿ ಎಂಟ್ರಿ. ಗಂಡನಿಗೆ ಗೊತ್ತಾಗದಂತೆ ಹೆಂಡತಿ, ಹೆಂಡತಿಗೆ ಗೊತ್ತಾಗದಂತೆ ಗಂಡ ಚಮಕ್ ನೀಡುತ್ತಾ ಜೀವನ ಸಾಗಿಸುತ್ತಾರೆ. ಇಬ್ಬರ ನಿಜ ರೂಪ ಗೊತ್ತಾಗುವುದಕ್ಕೆ ಹೆಚ್ಚೇನು ಸಮಯ ಬೇಕಾಗೊಲ್ಲ. ಸತ್ಯಾಂಶ ಗೊತ್ತಾದ ನಂತರ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆಯಲು ಮುಂದಾಗುತ್ತಾರೆ. ಖುಷ್-ಖುಷಿ ಡಿವೋರ್ಸ್ ಪಡೆಯೋದಕ್ಕೆ ಕಾರಣ ಏನು? ಇಬ್ಬರು ಬೇರೆ ಆದ ನಂತರ ಸಿನಿಮಾದಲ್ಲಿ ಏನು ಚಮಕ್ ಸಿಗುತ್ತೆ? ಮದುವೆ ಮಾಡಿದ ಮನೆಯವರು ಏನು ಮಾಡುತ್ತಾರೆ ? ಹೀಗೆ ಸಾಕಷ್ಟು ಕುತೂಹಲವಿರೋ ಕಥೆಯೇ ಚಮಕ್.

Category
🎥
Short film