• 7 years ago
In Mufti Movie, How Bhairathi Rangallu role created a sensation, in the same way his right hand Shabari role also thrilled viewers. But do you know who is this person. Shabari in real life is Master Hirannaiah's son Baabu Hirannaiah played a villain role 'Mufti' movie kannada movie. 'Mufti' movie starring Shiva Rajkumar and Srimurali.


ಶಿವರಾಜ್ ಕುಮಾರ್ ನಟನೆಯ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಕಳೆದ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳ ಪೈಕಿ 'ಮಫ್ತಿ' ಕೂಡ ಒಂದಾಗಿದೆ. 'ಮಫ್ತಿ' ಸಿನಿಮಾ ನೋಡಿದಾಗ ಅದರ ಅನೇಕ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ. ಭೈರತಿ ರಣಗಲ್ಲು, ಗಣ, ಶಬರಿ, ಸಿಂಗ, ಕಾಶಿ ಹೀಗೆ ಚಿತ್ರದ ಅನೇಕ ಪಾತ್ರಗಳು ಇಷ್ಟ ಆಗುತ್ತದೆ. ಅದರಲ್ಲಿ ಶಬರಿ ಪಾತ್ರ ತೆರೆ ಮೇಲೆ ಕಡಿಮೆ ಅವಧಿ ಇದ್ದರೂ ಹೆಚ್ಚು ಪರಿಣಾಮಕಾರಿ ಆಗಿದೆ. ಭೈರತಿ ರಣಗಲ್ಲು ಆಗಿರುವ ಶಿವಣ್ಣನ ಬಲ ಗೈ ಭಂಟನಾಗಿದ್ದ ಶಬರಿ ನಂತರ ಅವನಿಗೆ ಮೋಸ ಮಾಡುತ್ತಾನೆ. ಈ ಪಾತ್ರ ಸಿನಿಮಾ ನೋಡುಗರಿಗೆ ಥ್ರಿಲ್ ನೀಡುತ್ತದೆ. ಆದರೆ ಸಿನಿಮಾದಲ್ಲಿ ಇಷ್ಟ ಆಗುವ ಈ ಪಾತ್ರಧಾರಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ.ಅಂದಹಾಗೆ, 'ಮಫ್ತಿ' ಚಿತ್ರದ ಶಬರಿ ಪಾತ್ರದಲ್ಲಿ ನಟಿಸಿರುವುದು ಬಾಬು ಹಿರಣಯ್ಯ. ಇವರು ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣಯ್ಯ ಅವರ ಪುತ್ರ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಇವರು 'ಮಫ್ತಿ' ಸಿನಿಮಾದಲ್ಲಿಯೂ ಗಮನ ಸೆಳೆದಿದ್ದರು. ಇತ್ತೀಚಿಗಷ್ಟೆ ಬಂದ 'ಲೂಸ್ ಕನೆಕ್ಷನ್' ವೆಬ್ ಸೀರಿಸ್ ನಲ್ಲಿಯೂ ಪ್ರಮುಖ ಪಾತ್ರದಲ್ಲಿ ಬಾಬು ಹಿರಣಯ್ಯ ನಟಿಸಿದ್ದರು.

Category

🗞
News

Recommended