• 7 years ago
Deepak Rao a simple boy of Mangalore brutally murdered by some goons. He is known as BJP's active party worker and Bhajarangadal member.

ಬುಧವಾರ, ಜನವರಿ 3ರಂದು ಮಧ್ಯಾಹ್ನ ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ನ ಹತ್ಯೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ದೀಪಕ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಗಾಡಿಯಿಂದ ಗುದ್ದಿ, ಬೀಳಿಸಿ, ಕತ್ತಿಗಳನ್ನು ಬೀಸಿ, ನೆತ್ತರು ಚೆಲ್ಲಿಸಿ ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.ಅಷ್ಟು ಅಮಾನುಷವಾಗಿ ಹತ್ಯೆಯಾದ 25 ವರ್ಷದ ಯುವಕ ದೀಪಕ್ ರಾವ್ ಯಾರು? ಅಷ್ಟು ಭೀಕರವಾಗಿ ಆತನನ್ನು ಕೊಲೆಗೈಯಲು ಏನು ಕಾರಣ? ಇಲ್ಲಿದೆ ದೀಪಕ್ ರಾವ್ ಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಇಲ್ಲಿವೆ.ದೀಪಕ್ ರಾವ್ ಮಂಗಳೂರಿನ ಕಾಟಿಪಳ್ಳ ಮೂರನೇ ಬ್ಲಾಕ್ ಜನತಾ ಕಾಲನಿ ಬಳಿಯ ಗಣೇಶ ಕಟ್ಟೆ ನಿವಾಸಿ ದಿ.ರಾಮಚಂದ್ರ ರಾವ್, ಪ್ರೇಮ ದಂಪತಿಯ ಮೊದಲ ಮಗ. ದೀಪಕ್ ರಾವ್ ನಿಗೆ ಒಬ್ಬ ತಮ್ಮ ಇದ್ದಾನೆ, ಆತನದ್ದು ಕೂಲಿ ಕೆಲಸ, ಸತೀಶ್ ಆತನ ಹೆಸರು. ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ದೀಪಕ್ ರಾವ್‌ ಸಂಪಾದನೆಯಿಂದಲೇ ಮನೆ ನಡೆಯುತ್ತಿದುದು.

Category

🗞
News

Recommended