"ಯಾರಾದರೂ ನನ್ನ ಬರವಣಿಗೆಯನ್ನು ನಿರಾಕರಿಸಬಹುದು, ತಿರಸ್ಕರಿಸಬಹುದು. ಆದರೆ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ" ಎಂಬುದು ಪತ್ರಕರ್ತ ರವಿ ಬೆಳಗೆರೆಯವರ ಮಾತು. ಅವರೇ ಹೇಳಿಕೊಳ್ಳುವಂತೆ ಬೀದಿ ಬದಿಯ ಇಪ್ಪತ್ತು ರುಪಾಯಿಯ ಬಿರಿಯಾನಿ ತಿನ್ನುತ್ತಿದ್ದ ದಿನದಿಂದ ಮೂರು ಸಾವಿರಕ್ಕೆ ಒಂದು ಪ್ಲೇಟ್ ಬಿರಿಯಾನಿ ತಿನ್ನುವಷ್ಟು ಬೆಳೆದ ಬೆಳಗೆರೆ ಅವರ ಪ್ರಯಾಣವನ್ನು ನೆನಪಿಸಿಕೊಳ್ಳುವ ವಿಡಿಯೋ ಇದು. ಬಳ್ಳಾರಿ ಸತ್ಯನಾರಾಯಣ ಪೇಟೆಯ ಬಿ.ರವಿ ಎಂಬ ಎಸ್ಸೆಸ್ಸೆಲ್ಸಿ ಫೇಲಾದ ಹುಡುಗ ಏರಿದ ಎತ್ತರ, ಕಂಡ ಪಾತಾಳ ಕಡಿಮೆ ಏನಲ್ಲ. 1995ರಲ್ಲಿ ವಿದ್ಯಾಪೀಠ ಸರ್ಕಲ್ ನ ಒಂದು ಪುಟ್ಟ ಅಂಗಡಿಯೊಂದರಲ್ಲಿ ಶುರುವಾದ ಹಾಯ್ ಬೆಂಗಳೂರ್ ವಾರಪತ್ರಿಕೆಯನ್ನು ಬೆಂಗಳೂರಿನ ಗಡಿ ಕೂಡ ದಾಟಿಸುವ ಉದ್ದೇಶ ರವಿ ಬೆಳಗೆರೆ ಅವರಿಗೆ ಇರಲಿಲ್ಲ. ಆದರೆ ಆ ಪತ್ರಿಕೆ ಕರ್ನಾಟಕದಲ್ಲಿ ಮನೆ ಮಾತಾಯಿತು. ರವಿ ಬೆಳಗೆರೆ ಎಂಬ ಪತ್ರಕರ್ತ ಅದೆಷ್ಟೋ ಸಾವಿರ ಮಂದಿಯ ಕಣ್ಣಿಗೆ ಬೆರಗಿನಂತೆ ಕಂಡರು.
Category
🗞
News