• 7 years ago
Kannada actress Anika and Sachin marriage called off. Sachin and Anika were engaged in December last year. Karunya Ram had created a controversy and it ended finally into wedding call off.


ಕಳೆದ ಒಂದು ತಿಂಗಳ ಹಿಂದಿಯಷ್ಟೇ ನಿಶ್ವಿತಾರ್ಥ ಮಾಡಿಕೊಂಡಿದ್ದ ಖ್ಯಾತ ನಟಿ ನಿಶ್ಚಯವಾಗಿದ್ದ ಮದುವೆಯನ್ನ ಮುರಿದುಕೊಂಡಿದ್ದಾರೆ. ಎರಡು ಮನೆಯಲ್ಲಿ ಒಪ್ಪಿ ಖುಷಿಯಿಂದ ಮದುವೆಗೆ ಸಮ್ಮತಿ ನೀಡಿದ್ದ ನಟಿ ಈಗ ಮದುವೆಯೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿರುವ ನಟಿ ಮದುವೆ ಮುರಿದು ಬೀಳಲು ಕಾರಣ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅನ್ನುವುದು ಆಶ್ಚರ್ಯಕರವಾದ ವಿಚಾರ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಮದುವೆ ಆಗಬೇಕಿತ್ತು. ಆದರೆ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿದ ನಟಿ ಮದುವೆ ಆಗದಿರಲು ನಿರ್ಧಾರ ಮಾಡಿದ್ದಾರೆ. ಫಿಕ್ಸ್ ಆಗಿದ್ದ ಮದುವೆಯನ್ನ ಮುರಿದುಕೊಂಡ ನಟಿ ಯಾರು? ಯಾವ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿಕೊಂಡರು, ನಟಿಯ ಮದುವೆ ಮುರಿದ ಮತ್ತೊಬ್ಬ ನಟಿ ಯಾರು ? ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಅನಿಕಾ ಮದುವೆ ಕ್ಯಾನ್ಸಲ್ ಆಗಿದೆ. ನಿಶ್ಚಿತಾರ್ಥದ ಸಂದರ್ಭದಲ್ಲೇ ವಿವಾದ ಸೃಷ್ಠಿ ಆದ ನಂತರ ಅನಿಕಾ ಮನೆಯಲ್ಲಿ ಮದುವೆ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

Category

🗞
News

Recommended