• 6 years ago
'ಅನುಭವ', 'ಲವ್ ಟ್ರೇನಿಂಗ್', 'ಅಜಗಜಾಂತರ'... ಹೀಗೆ ಭಿನ್ನ ವಿಭಿನ್ನ ಸಿನಿಮಾಗಳನ್ನ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ನೀಡಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದ ಕಾಶಿನಾಥ್ ಈಗ ನೆನಪು ಮಾತ್ರ.

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ನಿನ್ನೆ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಕಾಶಿನಾಥ್ ಅವರದ್ದು ಸಾಯುವ ವಯಸ್ಸಲ್ಲ ಅಂತ ಹಲವು ಕಲಾವಿದರು ಕೂಡ ಮಮ್ಮಲ ಮರುಗಿದರು.

ಅಷ್ಟಕ್ಕೂ, ಕಾಶಿನಾಥ್ ಅವರಿಗೆ ಎಷ್ಟು ವಯಸ್ಸಾಗಿತ್ತು ಅಂತ ಕೇಳಿದ್ರೆ ಸ್ಯಾಂಡಲ್ ವುಡ್ ಮಂದಿ ಬಳಿ ಸ್ಪಷ್ಟ ಉತ್ತರ ಇರಲಿಲ್ಲ. ಯಾಕಂದ್ರೆ, ಕಾಶಿನಾಥ್ ಎಂದೂ ಹುಟ್ಟುಹಬ್ಬ ಆಚರಿಸಿಕೊಂಡವರೇ ಅಲ್ಲ.! ಯಾರ ಬಳಿಯೂ ತಮ್ಮ ವಯಸ್ಸು ಹಾಗೂ ಜನ್ಮದಿನಾಂಕವನ್ನ ಹೇಳಿಕೊಂಡವರೂ ಅಲ್ಲ.!ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಕಾಶಿನಾಥ್ ತಮ್ಮ ಜನ್ಮದಿನಾಂಕವನ್ನ
ಬಹಿರಂಗ ಪಡಿಸಿರಲಿಲ್ಲ.
Kannada well known Director and actor Kashinatha is no more . But he always kept his age and DOB a big secret . After his death his driving license has become viral and his age is no more a secret

Recommended