• 7 years ago
ನಟ ಉಪೇಂದ್ರ ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ತಮ್ಮ ಬರವಣಿಗೆಯನ್ನು ತೋರಿಸುತ್ತಿದ್ದರು. ಆದರೆ ಇದೀಗ ಉಪ್ಪಿ ಮೊದಲ ಬಾರಿಗೆ ಒಂದು ಪುಸ್ತಕ ಬರೆದಿದ್ದಾರೆ. ನಿನ್ನೆ ಬಿಡುಗಡೆಯಾಗಿರುವ ಈ ಪುಸ್ತಕಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ.ತಮ್ಮ ಸ್ಟೈಲ್ ನಲ್ಲಿಯೇ ಉಪೇಂದ್ರ ಈ ಪುಸ್ತಕಕ್ಕೆ ಹೆಸರಿಟ್ಟಿದ್ದಾರೆ. 'ಇದನ್ನ ಓದ್ಬೇಡಿ' ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಬಂದಿದ್ದು, ಅದನ್ನ ಜನ ಮುಗಿ ಬಿದ್ದು ಓದುತ್ತಿದ್ದಾರೆ. ಉಪೇಂದ್ರ ಬಗ್ಗೆ ಈಗಾಗಲೇ ಅನೇಕ ಪುಸ್ತಕಗಳು ಬಂದಿದೆ. ವಿಶೇಷ ಅಂದರೆ ಇದು ಸ್ವತಃ ಉಪ್ಪಿ ಅವರೇ ಬರೆದ ಮೊದಲ ಪುಸ್ತಕವಾಗಿದೆ. ಅಂದಹಾಗೆ, ಈ ಪುಸ್ತಕದಲ್ಲಿ ಉಪೇಂದ್ರ ಅವರ ಬಾಲ್ಯ, ತಾರುಣ್ಯ, ಅವಮಾನ, ಸಿನಿಮಾ, ಹಸಿವು, ಸಂಕಟ ಸೇರಿದಂತೆ ಪ್ರಜಾಕೀಯದ ವರೆಗೆ ಅನೇಕ ಕುತೂಹಲಕಾರಿ ವಿಷಯಗಳ ಇದೆ. ಒಂದು ಮಾತಿನಲ್ಲಿ ಹೇಳಬೇಕು ಅಂದರೆ 'ಇದನ್ನ ಓದ್ಬೇಡಿ' ಉಪೇಂದ್ರ ಅವರ 'ಆತ್ಮ ಚರಿತ್ರೆ' ಅಂತೆ.

Uppi writes a new book which is infact his autobiography in a way .

Category

🗞
News

Recommended