• 7 years ago
Siddu Nyamagouda, the farmer and fighter, had defeated former chief minister of Karnataka Ramakrishna Hegde in Bagalkot Lok Sabha elections in 1991. Siddu fought for construction of barrage in Bagalkot. He breathed last on 28th May in a car accident.

ಆಗ, ಕರ್ನಾಟಕದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಅಷ್ಟರಲ್ಲಾಗಲೇ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಭಾರೀ ಹೆಸರು ಗಳಿಸಿದ್ದರು. ಅವರ ಗೆಲುವು ಬಾಗಲಕೋಟೆಯಲ್ಲಿ ನಿಶ್ಚಿತವೆಂದೇ ಎಲ್ಲರೂ ನಿರ್ಧರಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ವ್ಯಕ್ತಿ ಒಬ್ಬ ರೈತ. ಅವರು ಮೊದಲನೇ ಬಾರಿ ಚುನಾವಣಾ ಕಣಕ್ಕಿಳಿದಿದ್ದರು. ಆದರೆ, ರಾಮಕೃಷ್ಣ ಹೆಗಡೆ ಅವರ ಪ್ರತಿಷ್ಠೆಗೆ ಮರ್ಮಾಘಾತವಾಗುವಂಥ ಫಲಿತಾಂಶ ಪ್ರಕಟವಾಗಿತ್ತು. ಅವರನ್ನು ಒಬ್ಬ ರೈತ 21,204 ಮತಗಳ ಅಂತದಿಂದ ಸೋಲಿಸಿ ದೆಹಲಿಯ ಸಂಸತ್ತನ್ನು ಪ್ರವೇಶಿಸಿದ್ದರು.

Category

🗞
News

Recommended