Loksabha elections 2019: ಮಂಡ್ಯ ಜೆಡಿಎಸ್ ಅಭ್ಯರ್ಥಿ: ಇರೋ ಗೊಂದಲ ಸಾಲದ್ದಕ್ಕೆ ಇನ್ನೊಬ್ಬರ ಎಂಟ್ರಿ..!

  • 5 years ago
IRS ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ತಮ್ಮ ಸೇವೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಸಜ್ಜಾಗಿದ್ದರು. ಇದು ಆಗದೇ ಇದ್ದಾಗ, ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೂ ವಿಫಲ ಪ್ರಯತ್ನ ನಡೆಸಿದ್ದರು. ಇದೊಂದು ಕಡೆ. ಇನ್ನೊಂದೆಡೆ, ಶಿವರಾಮೇ ಗೌಡರು ಕೂಡಾ ದೇವೇಗೌಡರ ಹಿಂದೆ ಬಿದ್ದು ಕೊನೆಗೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಯಾರಿಗೂ ಬೇಡವಾಗಿದ್ದ ಆ ಉಪಚುನಾವಣೆಯಲ್ಲಿ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರಿಂದ, ಶಿವರಾಮೇ ಗೌಡರು ಭಾರೀ ಅಂತರಗಳಿಂದ ಜಯಶಾಲಿಯಾಗಿದ್ದರು. ಬಿಜೆಪಿ ಪಡೆದ ಮತವೂ ಇಲ್ಲಿ ಗಮನಾರ್ಹವಾಗಿತ್ತು.

Mandya sitting MP LR Shivarame Gowda said I am the candidate. Shivarame Gowda said, I am the candidate, but I will stand with our leader HD Deve Gowda decision.

Category

🗞
News

Recommended