ಬಹುನಿರೀಕ್ಷಿತ ಎ-ಕ್ಲಾಸ್ ಲಿಮೋಸಿನ್ ಕಾರ್ ಬಿಡುಗಡೆಗೊಳಿಸಿದ ಮರ್ಸಿಡಿಸ್ ಬೆಂಝ್

  • 3 years ago
ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಬಹುನಿರೀಕ್ಷಿತ ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.39.90 ಲಕ್ಷಗಳಾಗಿದೆ. ಈ ಸೆಡಾನ್ ಕಾರ್ ಅನ್ನು ಎ 200, ಎ 220 ಡಿ ಹಾಗೂ ಎಎಂಜಿ ಎ 35 4 ಮ್ಯಾಟಿಕ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ಪೋಲಾರ್ ವೈಟ್, ಮೊಜಾವೆ ಸಿಲ್ವರ್, ಮೌಂಟೇನ್ ಗ್ರೇ, ಕಾಸ್ಮೋಸ್ ಬ್ಲ್ಯಾಕ್, ಡೆನಿಮ್ ಬ್ಲೂ ಹಾಗೂ ಇರಿಡಿಯಮ್ ಸಿಲ್ವರ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎಎಂಜಿ ಎ 35 ಕಾರ್ ಅನ್ನು ವಿಶೇಷ ಹಳದಿ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.