Here is a story of a woman, Shaila Humchadakatte, who has started a school, Vatsalya School for excellency in her husband's memory in Hosuru near Ayanuru in Shivamogga district. She is the woman achiever of the week.
ಕಲಿಕೆಯಲ್ಲೂ 'ವಾತ್ಸಲ್ಯ' ಅರಸುವ ಶಿವಮೊಗ್ಗದ ಶೈಲಾ ಹುಂಚದಕಟ್ಟೆ. ಶಿವಮೊಗ್ಗದಿಂದ ಸುಮಾರು 18 ಕಿ.ಮೀ. ದೂರದ ಅಯನೂರಿನ ಒಳಹೊಕ್ಕರೆ ಹೊಸೂರು ಎಂಬ ಊರು ಸಿಕ್ಕುತ್ತದೆ. ಆ ವಿಶಾಲ ಹಸಿರು ಪರಿಸರದ ನಡುವಲ್ಲಿ ತಲೆಯೆತ್ತಿ ನಿಂತ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸಿ ಎಂಬ ಶಾಲೆಗೆ ದಾರಿಹೋಕರನ್ನೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡುವ ಆಯಸ್ಕಾಂತದ ಸೆಳೆತವಿದೆ. 2014 ರಲ್ಲಿ 26 ಮಕ್ಕಳೊಂದಿಗೆ ಪುಟ್ಟ ಪ್ರಮಾಣದಲ್ಲಿ ಆರಂಭವಾದ 'ವಾತ್ಸಲ್ಯ' ದಲ್ಲಿ ಈಗ ಮುನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ತನ್ನ ವಿಭಿನ್ನ ಕಲಿಕಾ ಶೈಲಿ ಮತ್ತು ಮಹೋನ್ನತ ಉದ್ದೇಶಗಳಿಂದಾಗಿ ಸೆಳೆಯುವ ಈ ಅನನ್ಯ ಶಾಲೆಯ ಹಿಂದೆ ಮಹಿಳೆಯೊಬ್ಬರ ನಿರಂತರ ಶ್ರಮವಿದೆ. ಮೂಲತಃ ದಕ್ಷಿಣ ಕನ್ನಡದವರಾದ ಶೈಲಾ ಹುಂಚದಕಟ್ಟೆ ಅವರು ಮತ್ತು ಪತಿ ಕೃಷ್ಣಮೂರ್ತಿ ಅವರ ಕನಸಿನ ಫಲವೇ ಈ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸಿ. ಪ್ರಸ್ತುತ ಎಲ್ ಕೆಜಿ ಯಿಂದ 8 ನೇ ತರಗತಿಯವರೆಗಿನ ಒಟ್ಟು 300 ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಸ್ಟೇಟ್ ಸಿಲೆಬಸ್ ಪಠ್ಯವೇ ಆಗಿದ್ದರೂ ವಿದ್ಯಾರ್ಥಿಗಳಿಗೆ ಇಲ್ಲಿ ಪಠ್ಯದ ಹೊರತಾಗಿ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುವ ಯತ್ನ ನಡೆಯುತ್ತಿದೆ. ಶಾಲೆ ಎಂಬುದು ವಿದ್ಯಾರ್ಥಿಗಳಿಗೆ ಕಿರಿಕಿರಿ ಮೂಡಿಸದೆ ಮನಸ್ಸಿನಲ್ಲಿ ಸಂಭ್ರಮ ಮೂಡಿಸುವಂಥ ಪರಿಸರವನ್ನು ಸೃಷ್ಟಿಸುವುದು ವಾತ್ಸಲ್ಯದ ಆದ್ಯ ಉದ್ದೇಶ.

Category
🗞
News