• 7 years ago
"More than 50% of population in Bangalore can't speak Kannada. Do hell with your language" this is a message by a non Kannadiga lady who resides in Bengaluru. She has sent this message to a Kannadiga for asking her to speak Kannada. Social media people in Facebook are opposing her arrogance continuously.


ಛೆ, ಕನ್ನಡಿಗರಿಗೆ ಇದೆಂಥ ಅವಮಾನ? ಇಂಥ ಸೊಕ್ಕಿನ ಮಾತಿಗೆ ಏನೆನ್ನೋಣ? ಕರ್ನಾಟಕದಲ್ಲಿದ್ದುಕೊಂಡು, ಕನ್ನಡದ ಬಗ್ಗೆ ತಾತ್ಸಾರ ತೋರುವವರಿಗೆ ಏನು ಮಾಡಬೇಕು? ಕುಡಿಯುವುದಕ್ಕೆ ಕರ್ನಾಟಕದ ನೀರು, ಸೇವಿಸೋಕೆ ಗಾಳಿ, ದುಡಿಯೋಕೆ ಇಲ್ಲಿಯದೇ ಕಂಪೆನಿ, ಆದರೆ ಕನ್ನಡ ಎಂದರೆ ಮುಖ ಸಿಂಡರಿಸುವ ದುರಹಂಕಾರ! ಶರ್ವಾಣಿ ಗೌಡ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ಅನುಭವವೊಂದು ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಮಾತನಾಡದ ಅನ್ಯಭಾಷಿಕರನ್ನು ಕನ್ನಡಿಗರು ನೋಡುವ ದೃಷ್ಟಿಕೋನವನ್ನೇ ಬದಲಿಸುವಂತಿದೆ.ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ವ್ಯವಹರಿಸುವುದಕ್ಕಾಗಿ ಶರ್ವಾಣಿ ಅವರು 'ನಮಸ್ತೆ' ಎಂಬ ಮಾತಿನಿಂದ ಸಂಭಾಷಣೆ ಆರಂಭಿಸಿದ್ದಾರೆ. ಆದರೆ ಅತ್ತೆಡೆಯಿಂದ ಮಾತನಾಡುತ್ತಿದ್ದ ಯುವತಿ, 'ಮ್ಯಾಡಂ, ಇಂಗ್ಲಿಷ್ ಆರ್ ಹಿಂದಿ ಪ್ಲೀಸ್' ಎಂದಿದ್ದಾರೆ. ಅದಕ್ಕೆ ಶರ್ವಾಣಿ ಅವರು, 'where from you are speaking?' ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ಎಂದು ಆಕೆ ಉತ್ತರಿಸಿದ್ದಾಳೆ. 'ಕ್ಷಮಿಸಿ, ನೀವು ಕನ್ನಡದಲ್ಲಿ ಮಾತನಾಡದ ಹೊರತು ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಿಲ್ಲ' ಎಂದು ಹೇಳಿ ಶರ್ವಾಣಿಯವರು ಸಂಪರ್ಕ ಕಡಿತಗೊಳಿಸಿದ್ದಾರೆ.

Category

🗞
News

Recommended