ಮೊಟ್ಟೆ ಬೆಲೆಯಲ್ಲಿ ಏರಿಕೆ ! ಏಕೆ , ಏನು , ಎಷ್ಟು ? | Oneindia Kannada

  • 7 years ago
ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆಯ ದರವು ದಾಖಲೆಯ ಏರಿಕೆ ಕಂಡಿದ್ದು, ಇದರಿಂದಾಗಿ ಮೊಟ್ಟೆ ಹಾಗೂ ಅದರ ಖಾದ್ಯ ಪ್ರಿಯರಿಗೆ ದರ ಏರಿಕೆಯ ಕಾವು ತಟ್ಟಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಮೊಟ್ಟೆ ಪೂರೈಕೆ ಕಡಿಮೆಯಾಗಿ ಬೆಲೆಯು ಹೆಚ್ಚಾಗುತ್ತಿತ್ತು. ಆದರೆ, ಈ ವರ್ಷ ನವೆಂಬರ್‌ನಲ್ಲಿಯೇ ಪೂರೈಕೆ ಪ್ರಮಾಣ ಕಡಿಮೆಯಾಗಿದ್ದು, ಇದರಿಂದಾಗಿ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ನಗರದಲ್ಲಿ ಬಹುಪಾಲು ಜನ, ಎಗ್‌ ರೈಸ್, ಆಮ್ಲೆಟ್, ಎಗ್‌ ರೋಲ್‌, ಬಾಯಿಲ್ಡ್‌ ಎಗ್‌, ಎಗ್‌ ಬುರ್ಜಿ ಸೇರಿ ಹಲವು ಖಾದ್ಯಗಳನ್ನು ಸವಿಯುತ್ತಾರೆ. ಈಗ ಮೊಟ್ಟೆಯ ದರವು ಏರಿಕೆಯಾಗಿರುವುದರಿಂದ, ಖಾದ್ಯಗಳ ಬೆಲೆಯನ್ನು ₹1ರಿಂದ ₹5ರವರೆಗೆ ಹೆಚ್ಚಿಸಲಾಗಿದೆ. ‘ಮೊಟ್ಟೆ ಬೆಲೆ ಹೆಚ್ಚಿರುವುದರಿಂದ ಖಾದ್ಯಗಳ ಬೆಲೆ ಏರಿಕೆ ಅನಿವಾರ್ಯ. ಮೊಟ್ಟೆ ಬಳಸಿ ತಯಾರಿಸುವ ಎಲ್ಲ ತಿನಿಸುಗಳ ಬೆಲೆಯನ್ನು ₹1ರಿಂದ ₹3ರವರೆಗೆ ಹೆಚ್ಚಿಸಿದ್ದೇನೆ’ ಎಂದು ಮೊಟ್ಟೆ ಉತ್ಪನ್ನ ವ್ಯಾಪಾರಿ ಗಂಗಾಧರಪ್ಪ ತಿಳಿಸಿದರು.


In recent months, Bengalureans have had to pay exorbitant rates for their vegetables from time to time, due to a shortage of supply as a result of heavy rains. Now, rising prices of eggs are hurting the pocket of the average city dweller.

Category

🐳
Animals

Recommended