• 7 years ago
ಬಳ್ಳಾರಿ, ಫೆಬ್ರವರಿ 04: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ನುಡಿ ಹೊರಬಿದ್ದಿದೆ. ಈ 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಎನ್ನುವುದು ಈ ಬಾರಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. ಹೌದು, ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಎಂದು ಗೊರವಪ್ಪ ನುಡಿದ. ಆದರೆ ಆರಂಭದಲ್ಲಿ ಇದು ಅಲ್ಲಿ ನೆರೆದಿದ್ದ ಭಕ್ತರ ಗದ್ದಲದಿಂದಾಗಿ ಬೇರೆಯ ರೀತಿಯಲ್ಲಿ ಅರ್ಥೈಸಲಾಗಿತ್ತು.

Category

🗞
News

Recommended