• 8 years ago
ರಾಮಾಚಾರಿ'... 1991 ರಲ್ಲಿ ತೆರೆಕಂಡ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ. ರಾಮಾಚಾರಿ ಆಗಿ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಹಾಗೂ ನಂದಿನಿ ಆಗಿ ಮಾಲಾಶ್ರೀ ಅಭಿನಯದ ಈ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. 'ಶಾಂತಿ ಕ್ರಾಂತಿ' ಫ್ಲಾಪ್ ಆದ ಬಳಿಕ ಸಂಕಷ್ಟದಲ್ಲಿದ್ದ ವಿ.ರವಿಚಂದ್ರನ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿದ್ದು ಇದೇ 'ರಾಮಾಚಾರಿ' ಸಿನಿಮಾ. ಇಪ್ಪತ್ತಾರು ವರ್ಷಗಳ ಹಿಂದಿನ 'ರಾಮಾಚಾರಿ' ಚಿತ್ರವನ್ನ ನಾವೀಗ ನೆನಪು ಮಾಡಿಕೊಳ್ಳಲು ಕಾರಣ ಉದಯ ವಾಹಿನಿಯ 'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮ. ಮುಂದೆ ಓದಿರಿ.'ರಾಮಾಚಾರಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ರವಿಚಂದ್ರನ್ ಹಾಗೂ ಮಾಲಾಶ್ರೀ ಇದೀಗ 'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ಯಾರಿವಳು ಯಾರಿವಳು...' ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಈ ವಾರದ 'ಉದಯ ಸಿಂಗರ್ ಜ್ಯೂನಿಯರ್ಸ್'ನಲ್ಲಿ ‘ಯಾರಿವಳು ಯಾರಿವಳು..' ಹಾಡಿನಿಂದ ಎಲ್ಲರಿಗೂ 'ರಾಮಾಚಾರಿ' ಚಿತ್ರ ನೆನಪಾಗುತ್ತದೆ. 'ರಾಮಾಚಾರಿ' ಚಿತ್ರದ ಅದೇ ಹಾಡಿಗೆ ರವಿಚಂದ್ರನ್ ಮತ್ತು ಮಾಲಾಶ್ರೀ ಸ್ಟೆಪ್ ಹಾಕಿ ವೀಕ್ಷಕರನ್ನು ರಂಜಿಸಿದ್ದಾರೆ.''ಶೂಟಿಂಗ್ ನಡೆಯುತ್ತಿದ್ದಾಗ ಏನ್ ಆಗ್ತಿದೆ.. ಯಾಕ್ ಇಷ್ಟೆಲ್ಲಾ ಶಾಟ್ ತಗೊಳ್ತಾ ಇದ್ದಾರೆ ಅಂತ ಒಂದೂ ಗೊತ್ತಾಗ್ತಾ ಇರಲಿಲ್ಲ. ಯಾವತ್ತೂ ಹಾಡು ಪೂರ್ತಿಯಾಗಿ ತೆರೆಯ ಮೇಲೆ ಬಂತೋ, ರವಿಚಂದ್ರನ್ ಎನ್ನುವ ಅಗಾಧ ಶಕ್ತಿಯ ಅರಿವು ನನಗಾಯ್ತು'' - ಹೀಗೆಂದವರು ಕನ್ನಡದ ಖ್ಯಾತ ನಟಿ, ಕನಸಿನ ರಾಣಿ ಮಾಲಾಶ್ರೀ.
Crazy Star V.Ravichandran becomes emotional in Udaya Singer Juniors reality show.in last episode but in this episode he is very happy with malashree ..watch this video

Recommended