16 ಸೋಮವಾರಗಳು ಈ ರೀತಿ ವ್ರತ ಮಾಡಿದರೆ ಶಿವನ ಅನಿಗ್ರಹ ಖಂಡಿತ ಸಿಗುತ್ತೆ | Oneindia Kannada

  • 6 years ago
16 Monday (Somvar) Vrat Rules Monday is considered very auspicious for the worship of Lord Shiva. Devotees throng at Shiva temples on Mondays specially to get the blessings of the merciful Lord who can remove the difficulties of devotees and give all the desired boons. 16 Monday fast is one of the most popular vrat or fasting observances in Hinduism dedicated to Lord Shiva. Hindus believe that Lord Shiva is the supreme Lord and since observing fasting over 16 consecutive Mondays also known as solah somvar vrat is known to bestow several benefits to devotees.

ಸೋಮವಾರ ದಿನ ಅತ್ಯಂತ ಪವಿತ್ರ ಎಂದೆನಿಸಿದ್ದು ಈ ದಿನದಂದು ಶಿವನ ಪೂಜೆಯನ್ನು ನಡೆಸಲಾಗುತ್ತದೆ. ಈ ದಿನ ಶಿವಭಕ್ತರು ಶಿವಾಲಯಕ್ಕೆ ತೆರಳಿ ಶಿವನ ಪೂಜೆಯನ್ನು ಮಾಡುತ್ತಾರೆ ಪೂಜೆಯನ್ನು ನಡೆಸುತ್ತಾರೆ ತಮ್ಮ ಸಂಕಷ್ಟಗಳನ್ನು ಶಿವನಲ್ಲಿ ತೋಡಿಕೊಳ್ಳುತ್ತಾರೆ. ಭೋಲೇನಾಥ ಎಂದೇ ಕರೆಯಿಸಿಕೊಳ್ಳುವ ಶಿವನು ಸರಳ ಪೂಜೆಗೆ ಒಲಿಯುವ ಮಹಾಮಹಿಮನಾಗಿದ್ದಾರೆ. ವಿಶ್ವದ ಒಳಿತಿಗಾಗಿ ವಿಷವನ್ನು ಕುಡಿದು ನೀಲಕಂಠ ಎಂದೆನಿಸಿಕೊಂಡಿರುವ ಭಗವಂತನು ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವವರಾಗಿದ್ದಾರೆ. ಹದಿನಾರು ಸೋಮವಾರ ಅಥವಾ 16 ಸೋಮವಾರಗಳು ಶಿವನನ್ನು ಸಂತುಷ್ಟಗೊಳಿಸಿದರೆ ಭಗವಂತ ನಮ್ಮನ್ನು ಸದಾಕಾಲ ಆಶೀರ್ವದಿಸಿ ನಮ್ಮ ಅಭೀಷ್ಟಗಳನ್ನು ನೆರವೇರಿಸಿಕೊಡುತ್ತಾರೆ ಎಂಬುದು ನಂಬಿಕೆಯಾಗಿದೆ. ಸೋಲಃ ಸೋಮವಾರ ಹೆಚ್ಚು ಪ್ರಸಿದ್ಧವಾಗಿದ್ದು 16 ಸೋಮವಾರಗಳಂದು ಭಕ್ತರು ಶಿವನನ್ನು ನೆನೆದು ವ್ರತ ವನ್ನು ಕೈಗೊಂಡರೆ ಅದು ಅತ್ಯುತ್ತಮ ಎಂದೆನಿಸಿದೆ.

Recommended